ಸಂಗೀತ ಸಿದ್ಧ ಆಹಾರವಲ್ಲ: ರಾಜೇಶ್ ಕಾಳಿಂಗರಾವ್

ಉಡುಪಿ, ಮೇ 27: ಸಂಗೀತವೆಂಬುದು ಸಿದ್ಧ ಆಹಾರವಲ್ಲ. ಅದನ್ನು ಶ್ರದ್ಧೆಯಿಂದ, ಸರಿಯಾದ ರೀತಿಯಲ್ಲಿ, ಚೆನ್ನಾಗಿ ಕಲಿಯ ಬೇಕು. ಕಾರ್ಯಕ್ರಮ ದಲ್ಲಿ ಹಾಡಲೆಂದು ಒಂದೆರಡು ಹಾಡು ಕಲಿತು ಒಪ್ಪಿಸಿದ ಮಾತ್ರಕ್ಕೆ ಸಂಗೀತಗಾರರಾಗಲು ಸಾಧ್ಯವಿಲ್ಲ. ವಿಷಾದದ ಸಂಗತಿ ಎಂದರೆ ಇಂದು ಪ್ರಚಾರ ಹೆಚ್ಚಾಗಿದೆ, ಸಾಧನೆ ಕಡಮೆಯಾಗಿದೆ ಎಂದು ಖ್ಯಾತ ಯುವ ಗಾಯಕ ರಾಜೇಶ್ ಕಾಳಿಂಗ ರಾವ್ ಹೇಳಿದ್ದಾರೆ.
ಉಡುಪಿಯ ಡಾ ಟಿಎಂಎ ಪೈ ಶಿಕ್ಷಣ ಕಾಲೇಜಿನ ಮೂರನೆಯ ಸೆಮೆಸ್ಟರ್ ವಿದ್ಯಾರ್ಥಿಗಳಿಗಾಗಿ ನಡೆದ ಸಂಗೀತ ರಸಗ್ರಹಣ ಕಾರ್ಯಕ್ರಮವನ್ನು ರಾಏಶ್ ಕಾಳಿಂಗ ರಾವ್ ನಡೆಸಿಕೊಟ್ಟರು.
ಇದೇ ಸಂದರ್ಭದಲ್ಲಿ ಅವರು ತಮ್ಮ ತಂದೆ ಪ್ರಸಿದ್ಧ ಸುಗಮ ಸಂಗೀತಗಾರ ದಿ.ಪಾಂಡೇಶ್ವರ ಕಾಳಿಂಗರಾಯರ ಕನ್ನಡದ ಕವಿಗಳ ಪ್ರಸಿದ್ಧ ಹಾಗೂ ಜನಪ್ರಿಯ ಕವಿತೆಗಳನ್ನು ಹಾಡಿದ್ದಲ್ಲದೇ, ವಿದ್ಯಾರ್ಥಿಗಳಿಂದಲೂ ಹಾಡಿಸಿದರು.
ಕಾಲೇಜಿನ ಸಮನ್ವಯಾಧಿಕಾರಿ ಡಾ ಮಹಾಬಲೇಶ್ವರ ರಾವ್ ಕಲಾವಿದರ ಪರಿಚಯ ಮಾಡಿಕೊಟ್ಟರು.ಶ್ರೀಧರ ಹೆಗ್ಗಡೆ ಸ್ವಾಗತಿಸಿದರೆ ಪರಸು ದುರ್ಗಪ್ಪ ಎಂ ವಂದಿಸಿದರು.
Next Story





