ಯೋಗೇಶ್ ಮೃತದೇಹ ಪತ್ತೆಗೆ ಪ್ರಯತ್ನ: ಜಿಲ್ಲಾ ಟೈಲರ್ಸ್ ಸಂಘದಿಂದ ಎಸ್ಪಿಗೆ ಮನವಿ

ಉಡುಪಿ, ಜೂ.24: ಜಿಲ್ಲೆಯ ಕುಂದಾಪುರ ತಾಲೂಕು ಬೀಜಾಡಿಯಲ್ಲಿ ನಡೆದ ದುರಂತದಲ್ಲಿ ತುಮಕೂರು ಜಿಲ್ಲೆ ತಿಪಟೂರು ತಾಲೂಕು ನಿವಾಸಿ ರಾಜೇಶ್ ಟೈಲರ್ ಇವರ ಮಗ ಯೋಗೇಶ್ (22) ಸಮುದ್ರದ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಇದುವರೆಗೂ ಅವರ ಮೃತ ದೇಹ ಪತ್ತೆಯಾಗಿಲ್ಲ.
ಈ ಹಿನ್ನೆಲೆಯಲ್ಲಿ ಕರ್ನಾಟಕ ಸ್ಟೇಟ್ ಟೈಲರ್ಸ್ ಎಸೋಸಿಯೇಷನ್‌ನ ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಮೃತದೇಹದ ಪತ್ತೆಗೆ ತುರ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಇಂದು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ದಯಾನಂದ್ ಕೋಟ್ಯಾನ್ ಕೊರಂಗ್ರಪಾಡಿ ರಾಜ್ಯ ಸಮಿತಿಯ ಕಾರ್ಯದರ್ಶಿ ಶಾಂತ ಬಸ್ರೂರು, ಉಡುಪಿ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಸುರೇಶ್ ಪಾಲನ್, ಪ್ರಧಾನ ಕಾರ್ಯ ದರ್ಶಿ ದಯಾನಂದ ಪ್ರಭು ಹಿರಿಯಡ್ಕ, ನಗರ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುವಾಸಿನಿ ಜತ್ತನ್ನ, ರಾಜೀವ್‌ನಗರ ವಲಯ ಸಮಿತಿ ಅಧ್ಯಕ್ಷೆ ಅನಿತಾ, ಉಡುಪಿ ಜಿಲ್ಲಾ ಸಮಿತಿಯ ಮೀನಾಕ್ಷಿ ಆಚಾರ್ಯ ಹಾಗೂ ಶ್ರೀಧರ ಆಚಾರ್ಯ ಹಿರಿಯಡ್ಕ, ದಮಯಂತಿ ರಾಜೀವ್ ನಗರ, ಪುಷ್ಪಾವತಿ ನಾಯಕ, ನಾಗವೇಣಿ, ಖಾದರ್ ಬಿ. ಹಾಗೂ ಬಾಬು ಹಿರಿಯಡ್ಕ ಉಪಸ್ಥಿತರಿದ್ದರು.







