ಜ್ಞಾನಾರ್ಜನೆಯ ಮೂಲಕ ಸಮಾಜಕ್ಕೆ ಮಾದರಿ: ಶ್ರೀಧರ ಮೊಯ್ಲಿ

ಹಿರಿಯಡ್ಕ, ಜೂ.24: ವಿದ್ಯಾರ್ಥಿಗಳು ಸಂಘ ಸಂಸ್ಥೆಗಳು ನೀಡುವ ಶೈಕ್ಷಣಿಕ ಸೌಲಭ್ಯಗಳನ್ನು ಪಡೆದು ಜ್ಞಾನಾರ್ಜನೆಯ ಮೂಲಕ ಸಮಾಜಕ್ಕೆ ಮಾದರಿ ಪ್ರಜೆಯಾಗಬೇಕು ಎಂದು ಕರ್ನಾಟಕ ರಾಜ್ಯ ದೇವಾಡಿಗರ ಸಂಘ ಮಂಗಳೂರು ಇದರ ಅಧ್ಯಕ್ಷ ಕೆ. ಶ್ರೀಧರ ಮೊಯ್ಲಿ ಹೇಳಿದ್ದಾರೆ.
ಹಿರಿಯಡ್ಕ ಉಪಸಂಘದಲ್ಲಿ ಜರುಗಿದ ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ, ಪ್ರತಿಭಾನ್ವಿತರಿಗೆ ಸನ್ಮಾನ ಹಾಗೂ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಉಪಸಂಘದ ಅಧ್ಯಕ್ಷ ರಾಜೇಂದ್ರಕುಮಾರ್ ದೇವಾಡಿಗ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಂಗಳೂರಿನ ಉದ್ಯಮಿ ಅಶೋಕ್ ಮೊಯ್ಲಿ, ಉಡುಪಿ ಉದ್ಯಮಿ ಬಿ ಜಿ ಲಕ್ಷ್ಮಿಕಾಂತ್ ಬೆಸ್ಕೂರ್, ಗೌರವ ಅತಿಥಿಗಳಾಗಿ ಹಿರಿಯಡ್ಕದ ಎಚ್.ಮೊಹಿದಿನ್, ಪೆರ್ಡೂರು ಕುಂಬಾರ ಗುಡಿಕೈಗಾರಿಕೆ ಸಹಕಾರ ಸಂಘದ ಕಾರ್ಯನಿವಹಣಾಧಿಕಾರಿ ಸುಧಾಕರ ಕುಲಾಲ್ ಪಟ್ಲಾ ಇವರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಮಾಡಿದ ಸಮಾಜದ ಗಣ್ಯರಿಗೆ ಸನ್ಮಾನ, ವಿದ್ಯಾರ್ಥಿಗಳಿಗೆ ಶಾಲಾ ಪುಸ್ತಕ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ವೈದ್ಯಕೀಯ ನೆರವು ವಿತರಿಸಲಾಯಿತು.
ಎಚ್. ಗಣೇಶ್ ಸೇರಿಗಾರ್ ಪ್ರಾಸ್ತಾವಿಕ ಮಾತುಗಳ ಮೂಲಕ ಸ್ವಾಗತಿಸಿದರೆ, ಕಾರ್ಯದರ್ಶಿ ರಮೇಶ್ ಸೇರಿಗಾರ ವಂದಿಸಿದರು. ಪೂರ್ಣಿಮಾ ದಿನೇಶ್ ಹಾಗೂ ಶತ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.







