ಪ್ರತ್ಯೇಕ ಪ್ರಕರಣ: ಇಬ್ಬರು ನಾಪತ್ತೆ

ಶಿರ್ವ, ಜೂ.25: ಬೆಳಪು ಗ್ರಾಮದ ಜೆಸಿಂತಾ ಮಥಾಯಸ್ ಎಂಬವರ ಮಗ ಗೆವಿನ್ ಜೈಸನ್ ಮಥಾಯಸ್(24) ಎಂಬವರು ಬೈಕಂಪಾಡಿಗೆ ಹೋಗುವುದಾಗಿ ಹೇಳಿ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರಹ್ಮಾವರ: ಪೇತ್ರಿಯ ಸುರಭಿ ಬಾರ್‌ನ ಮ್ಯಾನೇಜರ್, ಚೇರ್ಕಾಡಿ ಗ್ರಾಮದ ಪ್ರಕಾಶ್(47) ಎಂಬವರು ಜೂ.24ರಂದು ಬೆಳಗ್ಗೆ ವ್ಯವಹಾರದ ಹಣವನ್ನು ಬ್ಯಾಂಕಿಗೆ ಜಮೆ ಮಾಡಲು ಹೋದವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





