ಸಂತೆಕಟ್ಟೆ: ಎಂಟಿಎಂನಲ್ಲಿನ ಹಣ ಕಳವಿಗೆ ಯತ್ನ

ಉಡುಪಿ, ಜೂ.26: ಪುತ್ತೂರು ಗ್ರಾಮದ ಸಂತೆಕಟ್ಟೆ ನವಾಮಿ ಬೇಕರಿ ಬಳಿಯ ಕೆನರಾ ಬ್ಯಾಂಕ್ ಎಟಿಎಂನಲ್ಲಿ ಹಣ ದೋಚಲು ಯತ್ನಿಸಿರುವ ಘಟನೆ ಜೂ.26ರಂದು ನಸುಕಿನ ವೇಳೆ 1.21ರ ಸುಮಾರಿಗೆ ನಡೆದಿದೆ.
ಆಯುಧದಿಂದ ಎಟಿಎಂನ ಬಾಗಿಲನ್ನು ಮುರಿದು ಒಳಗೆ ನುಗ್ಗಿ ಎಟಿಎಂನಲ್ಲಿದ್ದ ಹಣವನ್ನು ದೋಚಲು ಪ್ರಯತ್ನಪಟ್ಟಿದ್ದು, ನಂತರ ಎಟಿಎಂನ ಓಟಿಸಿ ಲಾಕ್, ಸೆನ್ಸಾರ್‌ನ್ನು ಹೊಡೆದು ಹಾಕಿ ನಷ್ಟವನ್ನುಂಟು ಮಾಡಿರುವುದಾಗಿ ದೂರಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





