ಮನೆಗೆ ನುಗ್ಗಿ ಸೊತ್ತುಗಳು ಕಳವು: ಪ್ರಕರಣ ದಾಖಲು
ಕುಂದಾಪುರ ಜು.9: ಕೋಟೇಶ್ವರದ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಅಪಾರ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಈ ಮನೆಯಲ್ಲಿ ಕಳೆದ 2 ವರ್ಷಗಳಿಂದ ಯಾರೂ ವಾಸವಿಲ್ಲದೇ ಇದ್ದು ರಾಗಿಣಿ ಎಂಬವರು 2-3 ತಿಂಗಳಿಗೊಮ್ಮೆ ಬಂದು ನೋಡಿಕೊಂಡು ಹೋಗು ತ್ತಿದ್ದರು. ಜು.8ರಂದು ಬಂದು ನೋಡುವಾಗ ಈ ಕಳವು ಪ್ರಕರಣ ಬೆಳಕಿಗೆ ಬಂದಿದೆ.
ಮನೆಯ ಹಿಂಬದಿಯ ಕಿಟಕಿಯನ್ನು ಕಿತ್ತು ಹಾಕಿ ಒಳಗೆ ನುಗ್ಗಿದ ಕಳ್ಳರು, ನಾಗದೇವರ ಚಿನ್ನದ ಕವಚ, ಗ್ಯಾಸ್ ಒಲೆ, ಸ್ಟೀಲ್ ಡ್ರಮ್, ಸ್ಟೀಲ್ ಬಕೇಟ್, ಸ್ಟೀಲ್ ತಟ್ಟೆಗಳು, ಅಲ್ಯೂಮಿನಿಯಂ ಬಕೆಟ್, ಮಿಕ್ಸರ್, ಕುಕ್ಕರ್, ತಾಮ್ರದ ಬಾಣಲೆ, ಅನ್ನದ ಸ್ಟೀಲ್ ಕಟಾರಾ, ಅಲ್ಯೂಮಿನಿಯಂ ಡಬ್ಬ, ತಾಮ್ರದ ಚೊಂಬುಗಳು, ಕಾಲು ದೀಪಗಳು, ತಾಮ್ರದ ಕೊಡಪಾನ, ಹಿತ್ತಾಳೆ ಹರಿವಾಣ, ತಾಮ್ರದ ಹಂಡೆ ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story