‘ಆಟಿಡೊಂಜಿ ದಿನ’ ಮಹಿಳೆಯರ ಮನೋರಂಜನೆ ಕೂಟ

ಉಡುಪಿ, ಜು.22: ಉಡುಪಿ ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟ, ದೊಡ್ಡಣಗುಡ್ಡೆ ಜನತಾ ವ್ಯಾಯಾಮ ಶಾಲೆ ಟ್ರಸ್ಟ್ ಜಂಟಿ ಆಶ್ರಯದಲ್ಲಿ ಆಟಿ ಡೊಟಜಿ ದಿನ ಮಹಿಳೆಯರ ಮನೋರಂಜನೆ ಕೂಟ ಜು.20ರಂದು ದೊಡ್ಡಣಗುಡ್ಡೆಯ ಜನತಾ ವ್ಯಾಯಾಮ ಶಾಲೆ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ತೆಂಗಿನ ಗಿರಿ ಅರಳಿಸಿ ಉದ್ಘಾಟಿಸಿದ ನಿರುಪಮಾ ಪ್ರಸಾದ್ ಶೆಟ್ಟಿ ಮಾತನಾಡಿ, ನಮ್ಮ ಹಿರಿಯರು ಆಟಿ ದಿನಗಳಲ್ಲಿ ಅಪಾರ ಕಷ್ಟ ಅನುಭವಿಸಿದರು. ಸಾಂಪ್ರಾದಯಿಕ ಆಚಾರ-ವಿಚಾರ, ಧರ್ಮ, ದೇವರು, ಸಂಸ್ಕೃತಿ ಉಳಿಸಿ ಬೆಳೆಸಿದರು. ಇವುಗಳನ್ನು ಕಾಪಾಡುವ ಜವಾಬ್ಧಾರಿ ಯುವ ಜನಾಂಗದ ಮೇಲಿದೆ ಎಂದು ತಿಳಿಸಿದರು.
ಮಹಿಳಾ ಸದಸ್ಯರು ಮನೋರಂಜನೆ ಕೂಟದಲ್ಲಿ ತುಳುನಾಡಿನ ಯಕ್ಷಗಾನ, ಕಂಬಳ, ಜಾನಪದ ಶೈಲಿ ನೃತ್ಯ ಹಾಗೂ ದೈವಾರಾಧನೆಯ ನೃತ್ಯ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ವಿವಿಧ ಮಹಿಳಾ ತಂಡಗಳು ಸಾಂಪ್ರಾಯಿಕ 25ಕ್ಕೊ ಹೆಚ್ಚಿನಆಟಿಯ ವೈವಿಧ್ಯಮಯ ಅಡುಗೆಯ ತಿಂಡಿ, ತಿನಿಸುಗಳನ್ನೂ ತಯಾರಿಸಿ ತಂದು ಉಣಬಡಿಸಿದರು.
ವೇದಿಕೆಯಲ್ಲಿ ಉಡುಪಿ ನಗರಸಭಾ ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಪ್ರಭಾಕರ ಪೂಜಾರಿ, ಜನತಾ ವ್ಯಾಯಾಮ ಶಾಲೆ ಟ್ರಸ್ಟ್ ಅಧ್ಯಕ್ಷ ರಾಮದಾಸ್ ಶೆಟ್ಟಿ, ಉಡುಪಿ ಜಿಲ್ಲಾ ಮಹಿಳಾ ಒಕ್ಕೊಟದ ಅಧ್ಯಕ್ಷೆ ಸರಳಾ ಕಾಂಚನ್, ಮಾಜಿ ಜಿಪಂ ಉಪಾಧ್ಯಕ್ಷೆ ಶೀಲಾ ಶೆಟ್ಟಿ, ಮಹಿಳಾ ಒಕ್ಕ್ಕೂಟದ ಪ್ರಧಾನ ಕಾರ್ಯದರ್ಶಿ ಸಹಾಯ ಮೇರಿ ಉಪಸ್ಥಿತರಿದ್ದರು. ಉಡುಪಿ ತಾಲೂಕು ಮಹಿಳಾ ಒಕ್ಕೊಟ ಅಧ್ಯಕ್ಷೆ ಪದ್ಮ ರತ್ನಾಕರ ಸ್ವಾಗತಿಸಿದರು. ಉಡುಪಿ ಪರಿಸರದ 20 ಹೆಚ್ಚಿನ ಮಹಿಳಾ ತಂಡಗಳ ಸದಸ್ಯರುಗಳು ಉಪಸ್ಥರಿದ್ದರು.







