ತೋಟಗಾರಿಕೆ ನರ್ಸರಿ ಸರ್ಟಿಫಿಕೇಟ್ ಕೋರ್ಸ್: ಅರ್ಜಿ ಆಹ್ವಾನ

ಉಡುಪಿ, ಜು.೨೭: ಬ್ರಹ್ಮಾವರದ ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಆಗಸ್ಟ್ 14ರಿಂದ 2025ರ ಫೆಬ್ರವರಿ 14ರವರೆಗೆ 6 ತಿಂಗಳುಗಳ ಕಾಲ ತೋಟಗಾರಿಕಾ ಬೆಳೆಗಳಲ್ಲಿ ಸಸ್ಯೋತ್ಪಾದನೆ ಮತ್ತು ನರ್ಸರಿ ನಿರ್ವಹಣೆ ಕುರಿತು ಕೌಶಲ್ಯಾಧಾರಿತ ತರಬೇತಿ ನೀಡಲಾಗುತ್ತಿದ್ದು, ಅರ್ಹ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ತರಬೇತಿಯಲ್ಲಿ ಬೀಜದಿಂದ ಕಸಿ ವಿಧಾನ, ಕಾಂಡದ ತುಂಡುಗಳಿಂದ, ಗೂಟಿ ವಿಧಾನದಿಂದ ಸಸ್ಯೋತ್ಪಾದನೆ ಮಾಡುವುದು, ಸಸ್ಯಗಾರಗಳ ನಿರ್ವಹಣೆ ಹಾಗೂ ಯಶಸ್ವಿ ಉದ್ಯಮಶೀಲತೆಗೆ ಸಾಲ ಸೌಲಭ್ಯಕ್ಕಾಗಿ ಬ್ಯಾಂಕುಗಳೊಂದಿಗೆ ಜೋಡಣೆ ಮಾಡಿಸಿ ಕೊಡುವುದರೊಂದಿಗೆ ತರಬೇತಿ ಪೂರೈಸಿದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಲಾಗುವುದು.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ: ೯೪೮೦೪೫೮೦೮೩, ೭೭೬೦೩೩೧೦೯೬ ಅಥವಾ ೯೭೪೧೦೦೯೧೩೧ನ್ನು ಸಂಪರ್ಕಿಸಬಹುದು ಎಂದು ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರ ಕಚೇರಿ ಪ್ರಕಟಣೆ ತಿಳಿಸಿದೆ.
Next Story





