ವಿಶ್ವಭ್ರೂಣ ಶಾಸ್ತ್ರಜ್ಞರ ದಿನಾಚರಣೆ: ಓಪನ್ ಡೇ ಕಾರ್ಯಕ್ರಮ

ಮಣಿಪಾಲ: ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಕ್ಲಿನಿಕಲ್ ಬಯೋಲಜಿ ಮತ್ತು ಸಂತಾನೋತ್ಪತ್ತಿ ವಿಜ್ಞಾನ ವಿಭಾಗಗಳ ವತಿಯಿಂದ ವಿಶ್ವಭ್ರೂಣ ಶಾಸ್ತ್ರಜ್ಞರ ದಿನಾಚರಣೆಯ ಪ್ರಯುಕ್ತ ಓಪನ್ ಡೇ ಕಾರ್ಯಕ್ರಮವನ್ನು ಜು.25ರಂದು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಹೆ ಆರೋಗ್ಯ ವಿಜ್ಞಾನ ವಿಭಾಗದ ಸಹಕುಲಪತಿ ಡಾ.ಶರತ್ ರಾವ್ ಮಾತನಾಡಿ, ಸಂತಾನೋತ್ಪತ್ತಿ ಔಷಧದ ಭವಿಷ್ಯವು ಕ್ಲಿನಿಕಲ್ ಭ್ರೂಣ ಶಾಸ್ತ್ರಜ್ಞರ ಪರಿಣತಿ ಮತ್ತು ಸಮರ್ಪಣೆಯ ಮೇಲೆ ಹೆಚ್ಚು ಅವಲಂ ಬಿತವಾಗಿದೆ. ಈ ವೃತ್ತಿಪರರು ದಂಪತಿಗಳಿಗೆ ಬಂಜೆತನದ ಸವಾಲುಗಳನ್ನು ಜಯಿಸಲು ಮತ್ತು ಅವರ ಕನಸುಗಳನ್ನು ನನಸಾಗಿಸಲು ಸಹಾಯ ಮಾಡಲಿದ್ದಾರೆ. ಅವರ ಮಹತ್ವಾಕಾಂಕ್ಷೆಯನ್ನು ಈಡೇರಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.
ಈ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಅಗತ್ಯವಾದ ಸಂಪನ್ಮೂಲಗಳು ಮತ್ತು ಜ್ಞಾನವನ್ನು ಹೊಂದಿರುವ ವಿದ್ಯಾರ್ಥಿ ಗಳು ಸಮಗ್ರ ಶಿಕ್ಷಣ, ತರಬೇತಿ ಮತ್ತು ಅತ್ಯಾಧುನಿಕ ಸಂಶೋಧನೆಗೆ ಒಡ್ಡಿಕೊಳ್ಳುವುದರ ಮೂಲಕ, ಮುಂದಿನ ಪೀಳಿಗೆಯ ಕ್ಲಿನಿಕಲ್ ಭ್ರೂಣ ಶಾಸ್ತ್ರಜ್ಞರು ಗಮನಾರ್ಹ ಕೊಡುಗೆಗಳನ್ನು ನೀಡಲು ಸಿದ್ಧರಾಗಿದ್ದಾರೆ ಎಂಬುದನ್ನು ಖಚಿತ ಪಡಿಸಿಕೊಳ್ಳ ಬಹುದು ಎಂದು ಅವರು ತಿಳಿಸಿದರು.
ಕೆಎಂಸಿಯ ಡೀನ್ ಡಾ.ಪದ್ಮರಾಜ್ ಹೆಗ್ಡೆ ಉಪಸ್ಥಿತರಿದ್ದರು. ಮಣಿಪಾಲದ ಸುತ್ತಮುತ್ತಲಿನ ಕಾಲೇಜುಗಳ ಜೀವ ವಿಜ್ಞಾನದ ವಿದ್ಯಾರ್ಥಿಗಳಿಗೆ ಪ್ರನಾಳ ಶಿಶು ಸೃಷ್ಟಿಯ ಐವಿಎಫ್ ವೆಜ್ಞಾನಿಕ ಪ್ರಕ್ರಿಯೆಯನ್ನು ಸನಿಹದಿಂದ ಅವಲೋಕಿ ಸುವ ಮತ್ತು ಭ್ರೂಣ ಶಾಸ್ತ್ರದ ತಜ್ಞರೊಂದಿಗೆ ಸಂವಾದಿಸುವ ಅವಕಾಶವನ್ನು ನೀಡಲಾಯಿತು.







