ಅಲೆವೂರು: ಉಚಿತ ಆರೋಗ್ಯ ತಪಾಸಣಾ ಶಿಬಿರ

ಉಡುಪಿ: ಅಲೆವೂರು ನೆಹರೂ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ ಹಾಗೂ ಉಡುಪಿ ಹೃದಯಮ್ ಫೌಂಡೇಷನ್‌ನ ಜಂಟಿ ಆಶ್ರಯದಲ್ಲಿ ಮಣಿಪಾಲದ ಕೆಎಂಸಿ ಸಮುದಾಯ ವೈದ್ಯಕೀಯ ವಿಭಾಗದ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ರವಿವಾರ ಅಲೆವೂರಿನ ಸಿಎ ಬ್ಯಾಂಕ್‌ನ ಸಮೃದ್ಧಿ ಸಭಾಭವನದಲ್ಲಿ ಆಯೋಜಿಸಲಾಗಿತ್ತು.
ಶಿಬಿರವನ್ನು ಹೃದಯಮ್ ಫೌಂಡೇಷನ್‌ನ ಪ್ರವರ್ತಕ ಸುಭಾಷ್ ಸಾಲ್ಯಾಯನ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಕೆಎಂಸಿ ವೈದ್ಯರಾದ ಡಾ.ಶಿಕಾ, ಸಂಸ್ಥೆಯ ಅಧ್ಯಕ್ಷ ದಯಾನಂದ ಪೂಜಾರಿ, ಕೊರಂಗ್ರಪಾಡಿ ಸಿಎ ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ವಿಜಯಲಕ್ಷ್ಮೀ, ಅಲೆವೂರು ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿ ಸಂತೋಷ ಪೈ, ದಯಾನಂದ ಅಂಚನ್, ಸತೀಶ್ ಪೂಜಾರಿ, ಮುರಳೀಧರ್ ಭಟ್, ಜಯಕರ್ ಪೂಜಾರಿ ಉಪಸ್ಥಿತರಿದ್ದರು.
ಸಂಸ್ಥೆಯ ಗೌರವಾಧ್ಯಕ್ಷ ಅಲೆವೂರು ಹರೀಶ್ ಕಿಣಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮವನ್ನು ಸತೀಶ್ ಪೂಜಾರಿ ನಿರೂಪಿಸಿ, ಕಾರ್ಯದರ್ಶಿ ಗುರುರಾಜ್ ಸಾಮಗ ವಂದಿಸಿದರು. ಶಿಬಿರದಲ್ಲಿ ಇಸಿಜಿ, ರಕ್ತದೊತ್ತಡ, ಮಧುಮೇಹ, ರಕ್ತದ ಹಿಮೋಗ್ಲೋಬಿನ್, ಸ್ತನ ಹಾಗೂ ಗರ್ಭಕೋಶದ ತಪಾಸಣೆ, ಚರ್ಮವ್ಯಾದಿ ತಪಾಸಣೆ ಸಹಿತ ಉಚಿತ ಔಷಧಿಯನ್ನೂ ನೀಡಲಾಯಿತು.





