ಸಂಗೀತ ಶಾಲೆ ‘ಕಲಾ ತಪಸ್ಸ್’ ಲಾಂಚನ ಅನಾವರಣ

ಉಡುಪಿ, ಅ.16: ಇಂದ್ರಾಳಿಯಲ್ಲಿ ಆಸಕ್ತರಿಗೆ ಸಂಗೀತ ಶಿಕ್ಷಣ ನೀಡುತ್ತಿರುವ ಕುಮಾರಿ ಶ್ರಾವ್ಯ ಎಸ್.ಬಾಸ್ರಿ ಅವರ ಸಂಗೀತ ಶಾಲೆಯ ಹೆಸರು ಮತ್ತು ಲಾಂಚನ ಅನಾವರಣ, ಸರಸ್ವತಿ ಪೂಜೆ ಮತ್ತು ವಿದ್ಯಾರ್ಥಿಗಳಿಂದ ಗಾನಾರ್ಪಣೆ ಕಾರ್ಯಕ್ರಮವು ಇಂದ್ರಾಳಿಯ ಶ್ರೀಸವಾಸ್ಯಂನಲ್ಲಿ ಜರಗಿತು.
ಮಾಹೆಯ ಗಾಂಧಿಯನ್ ಸೆಂಟರ್ ನಿರ್ದೇಶಕ ವರದೇಶ್ ಹಿರೇಗಂಗೆ ಲಾಂಛನ ಅನಾವರಣಗೊಳಿಸಿದರು. ಮುಖ್ಯ ಅತಿಥಿ ಯಾಗಿ ಸಂಗೀತ ಗುರು ವಿದ್ವಾನ್ ಮಧೂರು ಬಾಲಸುಬ್ರಹ್ಮಣ್ಯಂ ಜ್ಯೋತಿ ಬೆಳಗಿಸಿದರು. ಡಾ.ಕಲ್ಯಾ ಸುರೇಶ ಶೆಣೈ ಶುಭಾಶಂನೆಗೈದರು.
ಅರ್ಥಪೂರ್ಣ ಲಾಂಚನವನ್ನು ಸಂಸ್ಥೆಗಾಗಿ ವಿನ್ಯಾಸಗೊಳಿಸಿದ ವೆಬ್ ಡಿಸೈನರ್ ಶಶಿಕಾಂತ ಶೆಟ್ಟಿ ಅವರನ್ನು ಅಭಿನಂದಿ ಸಲಾಯಿತು. ಸಂಗೀತ ಶಿಕ್ಷಕಿ ಶ್ರಾವ್ಯ ಎಸ್.ಬಾಸ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ ಲಕ್ಷ್ಮೀ ಪುರಾಣಿಕ್ ಸ್ವಾಗತಿಸಿದರು. ಸುಬ್ರಹ್ಮಣ್ಯ ಬಾಸ್ರಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ದಿವ್ಯಾ ಯೋಗೀಶ್ ವಂದಿಸಿದರು.
Next Story





