ಬೈಲೂರು ದೇವಳದ ವಿಜ್ಞಾಪನಾ ಪತ್ರ ಬಿಡುಗಡೆ

ಉಡುಪಿ, ಅ.26: ಬೈಲೂರು ಶ್ರೀಮಹಿಷರ್ದಿನಿ ದೇವಸ್ಥಾನದ ಶತಚಂಡಿಕಾ ಯಾಗ ಹಾಗೂ ಬ್ರಹ್ಮಮಂಡಲ ಸೇವೆಯ ವಿಜ್ಞಾಪನಾ ಪತ್ರವನ್ನು ಕಾಣಿಯೂರು ಶ್ರೀವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಶನಿವಾರ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಬಡಗಬೆಟ್ಟು ಸೊಸೈಟಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಶತಚಂಡಿಕಾ ಯಾಗ ಹಾಗೂ ಬ್ರಹ್ಮಮಂಡಲ ಸೇವಾ ಸಮಿತಿಯ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ, ನಗರಸಭಾ ಸದಸ್ಯ ಕೃಷ್ಣ ರಾವ್ ಕೊಡಂಚ, ವಿದ್ವಾನ್ ಕೆ.ಎಸ್.ಕೃಷ್ಣಮೂರ್ತಿ ತಂತ್ರಿ, ಅರ್ಚಕ ವರದರಾಜ್ ಭಟ್, ಶ್ರೀನಿವಾಸ ಆಚಾರ್ಯ, ಸುದರ್ಶನ್ ಸೇರಿಗಾರ್ ಉಪಸ್ಥಿತರಿದ್ದರು.
ನಾರಾಯಣ ಸ್ವಾಗತಿಸಿದರು. ಪ್ರವೀಣ್ ಕುಮಾರ್ ಬೈಲೂರು ಕಾರ್ಯಕ್ರಮ ನಿರೂಪಿಸಿದರು.
Next Story





