Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ತಲ್ಲೂರು: ಕೆಳದಿ ಅರಸರು ಸೂಫಿ ಸಂತರಿಗೆ...

ತಲ್ಲೂರು: ಕೆಳದಿ ಅರಸರು ಸೂಫಿ ಸಂತರಿಗೆ ನೀಡಿದ ತಾಮ್ರಪಟ ದಾನ ಶಾಸನ ಪತ್ತೆ

ವಾರ್ತಾಭಾರತಿವಾರ್ತಾಭಾರತಿ9 Dec 2024 8:25 PM IST
share
ತಲ್ಲೂರು: ಕೆಳದಿ ಅರಸರು ಸೂಫಿ ಸಂತರಿಗೆ ನೀಡಿದ ತಾಮ್ರಪಟ ದಾನ ಶಾಸನ ಪತ್ತೆ

ಉಡುಪಿ, ಡಿ.9: ಸೂಫಿ ಸಂತನೊಬ್ಬನಿಗೆ ದಾನ ನೀಡಿದ ಕೆಳದಿ ಅರಸರದ ಕಾಲದ ತಾಮ್ರ ಶಾಸನವೊಂದು ತಲ್ಲೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಪತ್ತೆಯಾಗಿದೆ ಎಂದು ಶಿರ್ವ ಕಾಲೇಜಿನ ನಿವೃತ್ತ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ.ಟಿ.ಮುರುಗೇಶಿ ತಿಳಿಸಿದ್ದಾರೆ.

ಈ ಅಪರೂಪದ ತಾಮ್ರಪಟ ಶಾಸನವು 46 ಸೆ.ಮೀ. ಉದ್ದ, 33 ಸೆ.ಮೀ. ಅಗಲ ಮತ್ತು 3 ಮಿ.ಮೀ. ದಪ್ಪವಿದೆ. ಆಯತಾಕಾರದ ಈ ತಾಮ್ರಪಟದ ಎರಡೂ ಬದಿ ಕನ್ನಡ ಲಿಪಿ ಮತ್ತು ಭಾಷೆಯಲ್ಲಿ ಕಂಡರಿಸಿದ ಬರವಣಿಗೆಯಿದೆ. ಶಾಸನದ ಮುಮ್ಮುಖದಲ್ಲಿ ಹದಿನೇಳು ಸಾಲಿನ ಬರವಣಿಗೆ ಇದ್ದರೆ, ಹಿಮ್ಮುಖದಲ್ಲಿ ಹದಿಮೂರು ಸಾಲುಗಳ ಬರಹವಿದೆ ಎಂದು ಪ್ರೊ.ಮುರುಗೇಶಿ ತಿಳಿಸಿದ್ದಾರೆ.

ಶಾಸನವು ಶೈವಸ್ತುತಿಯೊಂದಿಗೆ ಆರಂಭವಾಗಿದ್ದು, ನಂತರ ಶಾಲಿವಾಹನ ಶಕ ವರುಷ 1666ನೆ ರುಧಿರೋದ್ಗಾರಿ ಸಂವತ್ಸರದ ಆಷಾಢ ಬ 5 ಯಲ್ಲು ಎಂಬ ಕಾಲಮಾನದ ಉಲ್ಲೇಖವಿದೆ. ಶಾಸನೋಕ್ತ ಕಾಲಮಾನವು ಕ್ರಿ.ಶ. 1744ರ ಜುಲೈ 4ಕ್ಕೆ ಸರಿಹೊಂದುತ್ತದೆ. ನಂತರ ಶ್ರೀಮದ್ ಎಡವ ಮುರಾರಿ, ಕೋಟೆ ಕೋಟೆ ಕೋಳಾಹಳ ವಿಶುಧ ವೈದಿಕ ಸಿದ್ಧಾಂತ ಪ್ರತಿಷ್ಠಾಪಕ ಕೆಳದಿ ಸದಾಶಿವರಾಯ ನಾಯಕರ ವಂಶೋದ್ಭವ ಸೋಮಶೇಖರ ನಾಯಕರ ಧರ್ಮಪತ್ನಿ ಚೆನ್ನಮ್ಮಾಜಿಯವರ ಪ್ರಪೌತ್ರರು ಬಸವಪ್ಪ ನಾಯಕರ ಪೌತ್ರರು ಸೋಮಶೇಖರ ನಾಯಕರ ಅನುಜ ವೀರಭದ್ರ ನಾಯಕರ ಪುತ್ರರು ಬಸವಪ್ಪ ನಾಯಕರು. ಈ ಎರಡನೇ ಬಸವಪ್ಪ ನಾಯಕರ ಆಳ್ವಿಕೆಯ ಕಾಲದಲ್ಲಿ ನೀಡಿದ ದಾನ ಶಾಸನವಿದು.

ಶಾಸನದ ಮಹತ್ವ: ಕೆಳದಿಯ ಎರಡನೇ ಬಸವಪ್ಪ ನಾಯಕರು ಬಿದನೂರಿನ ತಮ್ಮ ರಾಜಧಾನಿಯ ಹೊಸಪೇಟೆಯೊಳಗೆ ತಮ್ಮ ತಾಯಿ ಮಲ್ಲಮ್ಮಾಜಿಯವರ ಹೆಸರಿನಲ್ಲಿ ಒಂದು ಸ್ವತಂತ್ರ ಮಠವನ್ನು ಕಟ್ಟಿಸಿ, ಆ ಮಠವನ್ನು ಡಂಬಳದ ಫಕೀರ ದೇವರಿಗೆ ಕೊಟ್ಟರು. ಮಂತ್ರಿ ಗುರುವಪ್ಪನವರ ವಿನಂತಿಯ ಮೇರೆಗೆ ಆರು ಟನ್ ಹಾಗ ಮತ್ತು ಭೂಸ್ವಾಸ್ತೆಯನ್ನು ಮಠಕ್ಕೆ ಶಿವಾರ್ಪಿತವಾಗಿ ಕೊಟ್ಟರು.

ಶಾಸನೋಕ್ತ ಫಕೀರ ದೇವರು, ಡಂಬಳದ ಪ್ರಖ್ಯಾತ ಸೂಫಿ ಸಂತರ ಫಕೀರೇಶ್ವರ ಮಠ ಡಂಬಳದಲ್ಲಿದೆ. ಸೂಫಿ ಪಂಥದ ಫಕೀರರಿಗೆ ತನ್ನ ರಾಜಧಾನಿ ಬಿದನೂರಿನಲ್ಲಿ ಮಠವನ್ನು ಕಟ್ಟಿಸಿ ಭಾರಿ ಮೊತ್ತದ ಹಣ ಮತ್ತು ಭೂ ದಾನವನ್ನು ನೀಡಿರುವುದು, ಕೆಳದಿ ಅರಸರ ಧಾರ್ಮಿಕ ಸೌಹಾರ್ದತೆಗೆ ಈ ಶಾಸನ ಸಾಕ್ಷಿಯಾಗಿದೆ. ಬಿದನೂರು ಎಂಬುದು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಇಂದಿನ ನಗರವಾಗಿದೆ. ಶಾಸನದ ಕೊನೆಯಲ್ಲಿ ಶ್ರೀಸದಾಶಿವ ಎಂಬ ರುಜುವಿದೆ ಎಂದು ಪ್ರೊ.ಮುರುಗೇಶಿ ತಿಳಿಸಿದ್ದಾರೆ.



share
ವಾರ್ತಾಭಾರತಿ
ವಾರ್ತಾಭಾರತಿ
Next Story
X