ರಾಷ್ಟ್ರೀಯ ಯುವದಿನದ ಬಗ್ಗೆ ಪ್ರೇರಣಾತ್ಮಕ ಉಪನ್ಯಾಸ

ಉಡುಪಿ, ಜ.20: ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ವಿದ್ಯಾಸಂಸ್ಥೆಯ ಇನ್ನೋವೇಶನ್ ಘಟಕ ಮತ್ತು ಮೂಲ ವಿಜ್ಞಾನ ವಿಭಾಗದ ಸಹಯೋಗದೊಂದಿಗೆ ವಿದ್ಯಾರ್ಥಿಗಳಲ್ಲಿ ಉದ್ಯಮ ಶೀಲತೆಯ ಮನೋಭಾವವನ್ನು ಉತ್ತೇಜಿಸುವ ಸಲುವಾಗಿ ರಾಷ್ಟ್ರೀಯ ಯುವದಿನದ ಅಂಗವಾಗಿ ಸುಸ್ಥಿರ ಭವಿಷ್ಯಕ್ಕಾಗಿ ಯುವಕರು ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ ಇತ್ತೀಚೆಗೆ ಜರಗಿತು.
ಸಂಪನ್ಮೂಲ ವ್ಯಕ್ತಿಯಾಗಿ ಫೋರ್ತ್ ಫೋಕಸ್ ನಿರ್ದೇಶಕ ಗೌತಮ ನಾವಡ ಮಾತನಾಡಿ, ಉದ್ಯಮಶೀಲತೆ ಎಂದರೆ ಕೇವಲ ಯಶಸ್ಸು ಸಾಧಿಸುವುದು ಮಾತ್ರವಲ್ಲ ವಿಫಲತೆಯನ್ನು ಸ್ವೀಕರಿಸಿ ಅನುಭವಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
Next Story





