ಡಾ.ಕೆ.ಆರ್.ಕೆ. ಭಟ್‌ಗೆ ನಿಡಂಬೂರುಶ್ರೀ ಪ್ರಶಸ್ತಿ

ಉಡುಪಿ, ಜ.20: ನಿಡಂಬೂರು ಬೀಡಿನ ನಿಡಂಬೂರು ಮಾಗಣೆಯ ಸಾಧಕರಿಗೆ ನೀಡುವ ‘ನಿಡಂಬೂರುಶ್ರೀ ಪ್ರಶಸ್ತಿ’ಗೆ ಖ್ಯಾತ ವೈದ್ಯ ಹಾಗೂ ಕಳೆದ ಮೂರು ದಶಕಗಳಿಂದ ಪೇಜಾವರ ಮಠ ನಡೆಸುತ್ತಿರುವ ರಥಬೀದಿಯ ಶ್ರೀಕೃಷ್ಣ ಉಚಿತ ಚಿಕಿತ್ಸಾಲಯ ದಲ್ಲಿ ಸೇವಾ ರೂಪದಲ್ಲಿ ವೈದ್ಯಕೀಯ ಸೇವೆಸಲ್ಲಿಸುತ್ತಾ ಬಂದಿರುವ ಡಾ.ಕೆ.ಆರ್.ಕೆ. ಭಟ್ ಆಯ್ಕೆಯಾಗಿದ್ದಾರೆ.
ಉಡುಪಿಯ ಶ್ರೇಷ್ಠ ರಂಗನಿರ್ದೇಶಕ ಹಾಗೂ ಶಿಕ್ಷಕರೂ ಆಗಿದ್ದ ದಿ.ಕುತ್ಪಾಡಿ ವೆಂಕಟಾಚಲ ಭಟ್ಟರ ಪುತ್ರರಾದ ಡಾ.ಕೆ.ಆರ್.ಕೆ. ಭಟ್ ಕಡೆಕಾರಿನಲ್ಲಿ ’ಶುಶ್ರೂಷ’ ಚಿಕಿತ್ಸಾಲಯ ಮೂಲಕ ವೈದ್ಯಕೀಯ ವೃತ್ತಿ ನಡೆಸುತ್ತಿದ್ದು, ಕುತ್ಪಾಡಿಯ ಶ್ರೀಕಾನಂಗಿ ದೇವಳದ ಆಡಳಿತ ಮುಕ್ತೇಸರರಾಗಿ ಕಾರ್ಯ ನಿರ್ವಹಿಸುತಿದ್ದಾರೆ.
ಇವರಿಗೆ ಫೆ.01ರಂದು ಶನಿವಾರ ಅಂಬಲಪಾಡಿ ಕಂಬ್ಳಕಟ್ಟದ ಶ್ರೀ ಜನಾರ್ದನ ಮಂಟಪದಲ್ಲಿ ನಡೆಯುವ ಶ್ರೀಲಕ್ಷ್ಮೀ ಜನಾರ್ದನ ಯಕ್ಷಗಾನ ಕಲಾಮಂಡಳಿಯ 67ನೇ ವಾರ್ಷಿಕೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾ ಗುವುದು ಎಂದು ಪ್ರಾಯೋಜಕರಾದ ಅಂಬಲಪಾಡಿ ದೇವಸ್ಥಾನದ ಧರ್ಮ ದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





