Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ತೆಗ್ಗುಂಜೆಯಲ್ಲಿ ಅಪೂರ್ವ ಉಮಾಮಹೇಶ್ವರ...

ತೆಗ್ಗುಂಜೆಯಲ್ಲಿ ಅಪೂರ್ವ ಉಮಾಮಹೇಶ್ವರ ಶಿಲ್ಪ ಪತ್ತೆ

ವಾರ್ತಾಭಾರತಿವಾರ್ತಾಭಾರತಿ21 Jan 2025 7:44 PM IST
share
ತೆಗ್ಗುಂಜೆಯಲ್ಲಿ ಅಪೂರ್ವ ಉಮಾಮಹೇಶ್ವರ ಶಿಲ್ಪ ಪತ್ತೆ

ಉಡುಪಿ, ಜ.21: ಜಿಲ್ಲೆಯ ಕುಂದಾಪುರ ತಾಲೂಕಿನ ಆಜ್ರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ತಗ್ಗುಂಜೆಯಲ್ಲಿ ಅಪೂರ್ವ ಉಮಾಮಹೇಶ್ವರ ಶಿಲ್ಪ ಕಂಡುಬಂದಿದೆ. ಸುಮಾರು 35 ಸೆ.ಮಿ. ಎತ್ತರಹಾಗೂ 26 ಸೆ.ಮಿ. ಅಗಲದ ಪಂಚಲೋಹದ ಈ ಶಿಲ್ಪ, ಶೈವ-ಶಾಕ್ತ ಮತ್ತು ನಾಗಾರಾಧನೆ ಪಂಥಗಳ ಅಪೂರ್ವ ಸಂಗಮದ ಪ್ರತೀಕವಾಗಿದೆ ಎಂದು ಶಿರ್ವದ ಮುಲ್ಕಿ ಸುಂದರ ರಾಮ್ ಶೆಟ್ಟಿ ಪದವಿ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ್ತ ವಿಭಾಗದ ನಿವೃತ್ತ ಸಹ ಪ್ರಾಧ್ಯಾಪಕ ಪ್ರೊ.ಟಿ.ಮುರುಗೇಶಿ ಅಭಿಪ್ರಾಯ ಪಟ್ಟಿದ್ದಾರೆ.

ಎತ್ತರವಾದ ಪದ್ಮಾಸನ ಪೀಠದ ಮೇಲೆ ಆಸೀನವಾಗಿರುವ ಶಿವ ಜಟಾಮುಕಟನಾಗಿದ್ದು, ಪಂಚ ನಾಗಜಡೆಗಳ ಮುಕ್ಕೊಡೆ ಯನ್ನು ಹೊಂದಿದ್ದಾನೆ. ಪರ್ಯಂಕಾಸನ/ಸುಖಾಸೀನ ಭಂಗಿಯಲ್ಲಿ ಕುಳಿತಿರುವ ಶಿವನ ಎಡತೊಡೆಯ ಮೇಲೆ ಪಾರ್ವತಿ ಆಸೀನಳಾಗಿದ್ದಾಳೆ. ಶಿವನ ಕೆಳಗಿನ ಕೈ ಅಭಯ ಮುದ್ರೆಯಲ್ಲಿದ್ದು, ಎಡಗೈ ಪಾರ್ವತಿಯ ಎಡತೊಡೆಯನ್ನು ಸ್ಫರ್ಶಿಸುವಂತೆ ನಿರ್ದೇಶಿಸಲಾಗಿದೆ.

ಹಿಂದಿನ ಬಲಗೈಯಲ್ಲಿ ಪರಶು ಹಾಗೂ ಎಡಗೈಯಲ್ಲಿ ಮೃಗಧರ ನಾಗಿದ್ದಾನೆ. ಕೆಳಗೆ ಇಳಿಬಿಟ್ಟಿರುವ ಶಿವನ ಬಲಗಾಲು ನಂದಿಯನ್ನು ಸ್ಪರ್ಶಿಸುತ್ತಿದೆ. ಶಿವನ ಹಣೆಯ ಮಧ್ಯ ಭಾಗದಲ್ಲಿ ಮೂರನೇ ಕಣ್ಣನ್ನು ಚಿತ್ರಿಸಲಾಗಿದೆ. ಶಿವನ ಎಡಭಾಗದಲ್ಲಿ ಎಡಮುರಿ ಗಣಪತಿಯಿದ್ದು, ಬಲಭಾಗದಲ್ಲಿ ಷಣ್ಮುಖನ ಶಿಲ್ಪವಿದೆ. ಶಿಲ್ಪದ ಹಿಂಭಾಗದಲ್ಲಿ ಆಕರ್ಷಕವಾದ ಮಕರ ಲಾಂಛನದ ಪ್ರಭಾವಳಿಯಿದೆ. ಪ್ರಭಾವಳಿಯ ಮಧ್ಯದಲ್ಲಿ ಸಿಂಹ ಲಾಂಛನವಿದೆ.

ಶಿಲ್ಪದ ಶೈಲಿ ಮತ್ತು ಲಕ್ಷಣಗಳು 12ನೇ ಶತಮಾನದ ಶಿಲ್ಪಶೈಲಿಯನ್ನು ಹೊಂದಿವೆ ಎಂದು ಪ್ರೊ.ಟಿ.ಮುರುಗೇಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚಾರಿತ್ರಿಕ ಮಹತ್ವ: ಈ ಶಿಲ್ಪ ಕಲಾ ಇತಿಹಾಸಕಾರರಿಗೆ ಒಂದು ಅತ್ಯುತ್ತಮ ಪಾಠದ ಉದಾಹರಣೆಯಾಗಿದೆ. ಕೇವಲ ಕಲಾಶೈಲಿಯ ಆಧಾರದ ಮೇಲೆ ಕಾಲ ನಿರ್ಣಯ ಮಾಡುವುದು ಉಚಿತವಲ್ಲ ಎಂಬುದಕ್ಕೆ ಈ ಶಿಲ್ಪ ಸಾಕ್ಷಿಯಾಗಿದೆ. ಈ ಶಿಲ್ಪವನ್ನು ಅದರ ಪೀಠದಿಂದ ಬೇರ್ಪಡಿಸಿದರೆ, ಪೀಠದ ಮೇಲ್ಭಾಗದಲ್ಲಿ ಎರಡು ಸಾಲಿನ ಒಂದು ಚಿಕ್ಕ ಶಾಸನವಿದೆ. ಮೊದಲನೇ ಸಾಲಿನಲ್ಲಿ ಮೂರ್ತಿ ಸಾಕ್ಷಿ ಎಂಬ ಒಕ್ಕಣೆಯಿದೆ. ಎರಡನೇ ಸಾಲಿನಲ್ಲಿ ಗ 3 ಕೆರ ಶು 14 ಎಂಬ ಬರಹವಿದೆ. ಅಂದರೆ, ಮೂರು ಗದ್ಯಾಣದ ಚಿನ್ನವನ್ನು ಎರಕ ಹೊಯ್ಯಲಾಗಿದ್ದು, ಈ ಪಂಚಲೋಹದ ಮೂರ್ತಿಯಲ್ಲಿ 14 ಭಾಗ ಶುದ್ಧ ಚಿನ್ನವಿದೆ. ಅದಕ್ಕೆ ಈ ಮೂರ್ತಿ ಸಾಕ್ಷಿ ಎಂದು ಬರೆಯಲಾಗಿದೆ.

ಬರವಣಿಗೆಯು 17ನೇ ಶತಮಾನದ ಲಿಪಿ ಲಕ್ಷಣವನ್ನು ಹೊಂದಿರು ವುದರಿಂದ, ಈ ಮೂರ್ತಿಯನ್ನು 12ನೇ ಶತಮಾನದ ಶೈಲಿಯಲ್ಲಿ ವಿಜಯನಗರೋತ್ತರ ಕಾಲದಲ್ಲಿ ತಯಾರಿಸಲಾಗಿದೆ ಎಂಬುದು ಸ್ಪಷ್ಟ ವಾಗುತ್ತದೆ. ಆದ್ದರಿಂದ ಈ ಶಿಲ್ಪದ ನಿಜವಾದ ಕಾಲಮಾನ 17ನೇ ಶತಮಾನ ಎಂದು ಖಚಿತವಾಗುತ್ತದೆ.

ಉಮಾಮಹೇಶ್ವರ ಪಂಥ: ಉಮಾಮಹೇಶ್ವರ ಪಂಥ ಅಥವಾ ಸೋಮ ಪಂಥವನ್ನು ಸೋಮಭಟ್ಟ ಎಂಬುವರು ಗುಜರಾತಿನ ಸೋಮನಾಥದಲ್ಲಿ ಕ್ರಿ.ಶ.10-11 ನೇ ಶತಮಾನದಲ್ಲಿ ಹುಟ್ಟು ಹಾಕಿದ. ಬೌದ್ಧ ಧರ್ಮದ ವಜ್ರಯಾನ ಪಂಥ ದಿಂದ ಪ್ರಭಾತವಾದ ಈ ಪಂಥ ಪ್ರೇಮ ಕೇಂದ್ರಿತ ಪಂಥವಾಗಿದೆ. ಕರ್ನಾಟಕದಲ್ಲಿ 12ನೇ ಶತಮಾನದ ಶಾಸನವೊಂದು ಉಮೆಯನ್ನು ಒಂದರೆಗಳಿಗೆ ಬಿಟ್ಟಿರಲಾರ ಸೋಮ ಎಂದು ಬಣ್ಣಿಸುತ್ತದೆ. ಹನ್ನೆರಡನೇ ಶತಮಾನದ ಹೊತ್ತಿಗೆ ಕರಾವಳಿ ಯಲ್ಲಿ ಬೇರುಬಿಟ್ಟ ಈ ಪಂಥ, ಕರಾವಳಿಯ ಜನಪ್ರಿಯ ಧಾರ್ಮಿಕ ಪಂಥವಾಗಿ ಜನಮನ್ನಣೆಯನ್ನು ಪಡೆದುಕೊಂಡಿತ್ತು.

ಈ ಶಿಲ್ಪದ ಅಧ್ಯಯನಕ್ಕೆ ನೆರವು ನೀಡಿದ ತೋನ್ಸೆ ಸುಧಾಕರ ಶೆಟ್ಟಿ, ತಗ್ಗುಂಜೆ ದಯಾನಂದ ಶೆಟ್ಟಿ, ತಗ್ಗುಂಜೆ ಸಚಿನ್ ಶೆಟ್ಟಿ,ನಾಗರಾಜ್ ಶೆಟ್ಟಿ, ಮಂಜಯ್ಯ ಶೆಟ್ಟಿ ಮತ್ತು ಕುಂದಾಪುರದ ಬಿ. ಹರೀಶ್ ಹೆಗ್ಡೆ ಅವರಿಗೆ ತಾನು ಕೃತಜ್ಞನಾಗಿದ್ದೇನೆ ಎಂದು ಪ್ರೊ.ಮುರುಗೇಶಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X