ರಾಧಾ ಎಸ್.ಆರ್.ಗೆ ಪಿಎಚ್‌ಡಿ ಪದವಿ

ಉಡುಪಿ, ಜ.22: ಮೈಸೂರು ವಿಶ್ವವಿದ್ಯಾನಿಲಯದ ಮಂಡ್ಯ ತೂಬಿನಕೆರೆಯ ಸರ್ ಎಂ.ವಿಶ್ವೇಶ್ವರಯ್ಯ ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಎಸ್.ಚಂದ್ರಕಿರಣ್ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ’ಮಹಾಶ್ವೇತಾ ದೇವಿ ಹಾಗೂ ಸಾರಾ ಅಬೂಬಕ್ಕರ್ ಕೃತಿಗಳಲ್ಲಿ ಸ್ತ್ರೀ ಸಂವೇದನೆ’ ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾನಿಲಯ ಪಿಎಚ್.ಡಿ ಪದವಿ ನೀಡಿದೆ.
ಬೆಂಗಳೂರಿನ ಬಿಎಂಎಸ್ ಮಹಿಳಾ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥೆಯಾಗಿರುವ ಡಾ.ರಾಧಾ ಎಸ್.ಆರ್., ಮಾಗಡಿ ಸಂಕೀಘಟ್ಟದ ದಿ. ಎಂ.ಎನ್.ರಾಮಣ್ಣ ಹಾಗೂ ಸಿ.ಕೆ.ಪದ್ಮ ಅವರ ಪುತ್ರಿ ಹಾಗೂ ಉದಯವಾಣಿ ಮಾಜಿ ಉಪ ಸಂಪಾದಕ, ವ್ಯಂಗ್ಯಚಿತ್ರಕಾರ ರವೀಂದ್ರ ನಾಡಿಗ್ ಅವರ ಪತ್ನಿ.
Next Story





