ಬೈಕ್‌ಗಳ ಮಧ್ಯೆ ಅಪಘಾತ: ಓರ್ವ ಸವಾರ ಮೃತ್ಯು

ಬೈಂದೂರು: ಬೈಕ್‌ಗಳ ಮಧ್ಯೆ ಸಂಭವಿಸಿದ ಅಪಘಾದಲ್ಲಿ ಓರ್ವ ಸವಾರ ಮೃತಪಟ್ಟ ಘಟನೆ ಜ.21ರಂದು ರಾತ್ರಿ 9ಗಂಟೆ ಸುಮಾರಿಗೆ ಯೆಳಜಿತ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎದುರಿನ ರಾ.ಹೆ 766 ಸಿಯಲ್ಲಿ ನಡೆದಿದೆ.
ಮೃತರನ್ನು ಬೈಕ್ ಸವಾರ ಹೂವಯ್ಯ(48) ಎಂದು ಗುರುತಿಸಲಾಗಿದೆ. ಇನ್ನೊಂದು ಬೈಕಿನ ಸವಾರ ಮನೋಜ್ ಗಾಯ ಗೊಂಡು ಕುಂದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೈಂದೂರು ಕಡೆಯಿಂದ ಯೆಳಜಿತ್ ಕಡೆಗೆ ಹೋಗುತ್ತಿದ್ದ ಮನೋಜ್ ಚಲಾಯಿಸುತ್ತಿದ್ದ ಬೈಕ್, ಕೊಲ್ಲೂರು ಕಡೆಯಿಂದ ಯೆಳಜಿತ್ ಕಡೆಗೆ ಹೂವಯ್ಯ ಚಲಾಯಿಸಿ ಕೊಂಡು ಬರುತ್ತಿದ್ದ ಬೈಕಿಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಇಬ್ಬರು ರಸ್ತೆಗೆ ಬಿದ್ದು ಗಾಯಗೊಂಡರು. ಇವರಲ್ಲಿ ಗಂಭೀರವಾಗಿ ಗಾಯಗೊಂಡ ಹೂವಯ್ಯ ಬೈಂದೂರು ಸರಕಾರಿ ಆಸ್ಪತ್ರೆಗೆ ಕರೆದು ಕೊಂಡು ಬರುವ ದಾರಿ ಮಧ್ಯೆ ಮೃತಪಟ್ಟರೆನ್ನಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





