Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ಕರ್ನಾಟಕ ಕ್ರೀಡಾಕೂಟ| ಜಾಫರ್‌ ಖಾನ್,...

ಕರ್ನಾಟಕ ಕ್ರೀಡಾಕೂಟ| ಜಾಫರ್‌ ಖಾನ್, ನಿಯೋಲೆ ಕೂಟದ ‘ಶ್ರೇಷ್ಠ ಅತ್ಲೀಟ್’

► ಕೂಟದ ವೇಗದ ಓಟಗಾರರಾಗಿ ಮೂಡಿಬಂದ ಗಗನ್, ನಿಯೋಲೆ ►ರೋಚಕ ಸ್ಪರ್ಧೆ ಕಂಡುಬಂದ ಪುರುಷರ 100 ಮೀ.ಓಟ

ವಾರ್ತಾಭಾರತಿವಾರ್ತಾಭಾರತಿ23 Jan 2025 8:57 PM IST
share
ಕರ್ನಾಟಕ ಕ್ರೀಡಾಕೂಟ| ಜಾಫರ್‌ ಖಾನ್, ನಿಯೋಲೆ ಕೂಟದ ‘ಶ್ರೇಷ್ಠ ಅತ್ಲೀಟ್’

ಉಡುಪಿ, ಜ.23: ಬೆಂಗಳೂರಿನ ಗಗನ್ ಎಲ್.ಗೌಡ ಹಾಗೂ ನಿಯೋಲೆ ಅನ್ನಾ ಕಾರ್ನೆಲಿಯೋ ಅವರು ಉಡುಪಿಯ ಅಜ್ಜರಕಾಡಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ನಡೆದ ಕರ್ನಾಟಕ ಕ್ರೀಡಾಕೂಟ-2025ರ ಅತ್ಲೆಟಿಕ್ ವಿಭಾಗದ 100ಮೀ. ಸ್ಪ್ರಿಂಟ್‌ನಲ್ಲಿ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ಕೂಟದ ವೇಗದ ಓಟಗಾರರಾಗಿ ಮೂಡಿಬಂದರು.

ಅತ್ಯಂತ ರೋಚಕ ಹಾಗೂ ಅತ್ಯಂತ ನಿಕಟವಾಗಿ ಮುಕ್ತಾಯಗೊಂಡ ಪುರುಷರ 100ಮೀ. ಓಟದಲ್ಲಿ ಗಗನ್ ಅವರು 0.01ಸೆ. ಅಂತರದಲ್ಲಿ ತನ್ನ ನಿಕಟ ಪ್ರತಿಸ್ಪರ್ಧಿ ಚಾಮರಾಜನಗರದ ರವಿಕಿರಣ್ ಅವರನ್ನು ಹಿಂದೆ ಸರಿಸಿ ಗುರಿಮುಟ್ಟುವ ಮೂಲಕ ಚಿನ್ನದ ಪದಕವನ್ನು ಗೆದ್ದುಕೊಂಡರು. ರವಿಕಿರಣ್ ಅವರು ಸಹ ದಕ್ಷಿಣ ಕನ್ನಡದ ಸುಜನ್ ಥಾಮಸ್‌ರನ್ನು 0.01ಸೆ.ನಿಂದ ಹಿಂದಿಕ್ಕಿ ಬೆಳ್ಳಿಪದಕ ಪಡೆದರು.

ಪುರುಷರ 100ಮೀ. ಓಟದಲ್ಲಿ ಈ ಕೂಟದ ಅತ್ಯಂತ ರೋಚಕ ಸ್ಪರ್ಧೆ ಕಂಡುಬಂತು. ಓಟದ ಪ್ರಾರಂಭದಿಂದಲೇ ಗಗನ್, ರವಿಕಿರಣ್ ಹಾಗೂ ಸುಜನ್ ನಡುವೆ ಮುನ್ನಡೆಗಾಗಿ ಭಾರೀ ಪ್ರಯತ್ನ ಕಂಡುಬಂತು. ಮೂವರು ಒಂದೇ ಕ್ಷಣದಲ್ಲಿ ಗುರಿಮುಟ್ಟಿದಂತೆ ಕಂಡುಬಂದರೂ, ಕೊನೆಯ ಕೆಮರಾ ಕಣ್ಣಿನ ಮೂಲಕ ಕ್ರೀಡಾಕೂಟದ ತಾಂತ್ರಿಕ ಅಧಿಕಾರಿಗಳು ಹಲವು ಬಾರಿ ಪರಿಶೀಲಿಸಿ ಅಂತಿಮವಾಗಿ ಪದಕ ವಿಜೇತರ ಹೆಸರುಗಳನ್ನು ಪ್ರಕಟಿಸಿದರು.

ಮಹಿಳೆಯರ 100ಮೀ.ನಲ್ಲಿ ನಿಯೋಲೆ ಅವರ ಮೇಲುಗೈ ಸ್ಪಷ್ಟವಿತ್ತು. ಉಡುಪಿಯ ಸ್ತುತಿ ಪಿ.ಶೆಟ್ಟಿ ನಿಕಟ ಸ್ಪರ್ಧೆ ನೀಡಲು ಪ್ರಯತ್ನಿಸಿದರೂ ಸ್ವಲ್ಪದರಲ್ಲೇ ವಿಫಲರಾದರು. ಈಗಾಗಲೇ 200ಮೀ.ನಲ್ಲೂ ಬೆಳ್ಳಿ ಪದಕ ಗೆದ್ದಿರುವ ಸ್ತುತಿ ಸ್ಪ್ರಿಂಟ್‌ನಲ್ಲಿ ಎರಡು ಬೆಳ್ಳಿ ಪದಕ ಗೆದ್ದ ಸಾಧನೆ ಮಾಡಿದರು.

ಉಳಿದಂತೆ ಪುರುಷರ ಹೈಜಂಪ್‌ನಲ್ಲಿ 1.85ಮೀ. ಎತ್ತರ ನೆಗೆದ ಉಡುಪಿಯ ಸಿನನ್ ಅವರು ಜಯಿಸಿದರೆ, ಗುಂಡನ್ನು 15.66ಮೀ. ದೂರ ಎಸೆದ ಪ್ರಜ್ವಲ್ ಶೆಟ್ಟಿ ಉಡುಪಿಗೆ ಮತ್ತೊಂದು ಚಿನ್ನದ ಪದಕ ನೀಡಿದರು.

ದಿನದ ಅತ್ಲೆಟಿಕ್ಸ್ ಫಲಿತಾಂಶ: ಪುರುಷರ ವಿಭಾಗ

100ಮೀ.: ಗಗನ್ ಎಲ್.ಗೌಡ ಬೆಂಗಳೂರು (10.63ಸೆ.), 2.ರವಿಕಿರಣ್ ಚಾಮರಾಜನಗರ, 3.ಶಿಜನ್ ಥಾಮಸ್ ದಕ್ಷಿಣ ಕನ್ನಡ.

400ಮೀ. ಹರ್ಡಲ್ಸ್:1.ಭೂಷಣ ಸುನಿಲ್ ಪಾಟೀಲ್ ಬೆಳಗಾವಿ (53.81ಸೆ.), 2.ರಾಹುಲ್ ನಾಯಕ್ ಎನ್. ಮೈಸೂರು, 3.ಭಾಗ್ಯವಂತ ಎನ್. ಕಲಬುರ್ಗಿ.

5,000ಮೀ.:1.ಸಂದೀಪ್ ಟಿ.ಎಸ್. ತುಮಕೂರು (15ನಿ.00.07ಸೆ.), 2.ವೈಭವ ಮಾರುತಿ ಪಾಟೀಲ್ ಬೆಂಗಳೂರು, 3.ಗುರುಪ್ರಸಾದ್ ತುಮಕೂರು.

ಹೈಜಂಪ್:1.ಸಿನನ್ ಉಡುಪಿ(1.85ಮೀ.), 2.ಭವಿತ್‌ಕುಮಾರ್ ಉಡುಪಿ, 3.ಕೆ.ಆರ್.ಯಶ್ವಿನ್ ದಕ್ಷಿಣ ಕನ್ನಡ.

ಶಾಟ್‌ಪುಟ್: 1.ಪ್ರಜ್ವಲ್ ಎಂ.ಶೆಟ್ಟಿ ಉಡುಪಿ (15.66ಮೀ.), 2.ಮುಹಮ್ಮದ್ ಸಕ್ಲೇನ್ ಅಹ್ಮದ್ ಮೈಸೂರು, 3.ಮನುಷ್ ಬಿ. ಮೈಸೂರು.

ಮಹಿಳೆಯರ ವಿಭಾಗ

100ಮೀ.:1.ನಿಯೋಲೆ ಅನ್ನಾ ಕಾರ್ನೆಲಿಯೊ ಬೆಂಗಳೂರು (11.93ಸೆ.), 2.ಸ್ತುತಿ ಪಿ.ಶೆಟ್ಟಿ ಉಡುಪಿ, 3.ವರ್ಷಾ ವಿ. ಬೆಂಗಳೂರು.

400ಮೀ. ಹರ್ಡಲ್ಸ್: 1.ದಿಕ್ಷೀತಾ ರಾಮಕೃಷ್ಣ ಗೌಡ, ಉತ್ತರಕನ್ನಡ (1ನಿ.03.1ಸೆ.), 2.ಅಪೂರ್ವ ಆನಂದ ನಾಯ್ಕ್ ಬೆಳಗಾವಿ, 3.ಅರ್ನಿಕಾ ವರ್ಷಾ ಡಿಸೋಜ ಉಡುಪಿ.

5000ಮೀ.:1.ತೇಜಸ್ವಿನಿ ಎನ್.ಎಲ್. ಕೊಡಗು (19ನಿ.27.20ಸೆ.), 2.ಪ್ರಣಾಮ್ಯ ಎನ್. ಶಿವಮೊಗ್ಗ, 3.ಶುಭಾಂಗಿ ಪ್ರಮೋದ್ ಕಾಕತ್ಕರ್ ಬೆಳಗಾವಿ.

ಹೈಜಂಪ್: 1.ಪಲ್ಲವಿ ಎಸ್.ಪಾಟೀಲ್ ಯಾದಗಿರಿ (1.76ಮೀ.), 2.ಎಸ್.ಬಿ.ಸುಪ್ರಿಯಾ ಚಿಕ್ಕಮಗಳೂರು, 3.ಎಫ್.ವಿ.ಮೊಂತೆರೋ ದಕ್ಷಿಣ ಕನ್ನಡ.










share
ವಾರ್ತಾಭಾರತಿ
ವಾರ್ತಾಭಾರತಿ
Next Story
X