ಸೆಲೂನ್ ದಾಳಿಗೂ ಶ್ರೀರಾಮಸೇನೆಗೂ ಸಂಬಂಧವಿಲ್ಲ: ಜಯರಾಮ ಅಂಬೆಕಲ್ಲು

ಉಡುಪಿ, ಜ.23: ಮಂಗಳೂರಿನಲ್ಲಿ ನಡೆದ ಸೆಲೂನ್ ದಾಳಿಗೂ ಶ್ರೀರಾಮಸೇನೆ ಗೂ ಸಂಬಂಧವಿಲ್ಲ ಎಂದು ಶ್ರೀರಾಮಸೇನೆ ಮಂಗಳೂರು ವಿಭಾಗ ಅಧ್ಯಕ್ಷ ಜಯರಾಮ ಅಂಬೆಕಲ್ಲು ಹೇಳಿದ್ದಾರೆ.
ದಾಳಿಯ ಕುರಿತಂತೆ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿರುವ ಅವರು, ಇಂದು ಪ್ರಮೋದ್ ಮುತಾಲಿಕರ 70 ನೇ ವರ್ಷದ ಜನ್ಮ ದಿನಾಚರಣೆ ಪ್ರಯುಕ್ತ ಎಲ್ಲಾ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಪೂಜೆ ಹವನ ಹಾಗೂ ಇನ್ನಿತರ ಕಾರ್ಯ ಕ್ರಮ ನಡೆಸುತ್ತಿದ್ದಾರೆ. ಹೆಚ್ಚಿನ ಪದಾಧಿಕಾರಿಗಳು ಅಯೋಧ್ಯೆ ಹಾಗೂ ಕುಂಭ ಮೇಳ ಪ್ರವಾಸದಲ್ಲಿದ್ದಾರೆ ಎಂದು ಹೇಳಿದ್ದಾರೆ.
Next Story





