Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ಕೋ.ಚೆ. ಅನ್ಯಾಯಕ್ಕೆ ಸಿಡಿಯುವ ಬೆಂಕಿನ...

ಕೋ.ಚೆ. ಅನ್ಯಾಯಕ್ಕೆ ಸಿಡಿಯುವ ಬೆಂಕಿನ ಕಿಡಿ: ಶಾಂತಾ ಜಯಪ್ರಸಾದ್

ತೆಂಕನಿಡಿಯೂರು ಕಾಲೇಜಿನಲ್ಲಿ ಕೋ.ಚೆನ್ನಬಸಪ್ಪ ಕೃತಿಗಳ ಅವಲೋಕನ

ವಾರ್ತಾಭಾರತಿವಾರ್ತಾಭಾರತಿ24 Jan 2025 7:01 PM IST
share
ಕೋ.ಚೆ. ಅನ್ಯಾಯಕ್ಕೆ ಸಿಡಿಯುವ ಬೆಂಕಿನ ಕಿಡಿ: ಶಾಂತಾ ಜಯಪ್ರಸಾದ್

ಉಡುಪಿ: ‘ಅನ್ಯಾಯಕ್ಕೆ ಸಿಡಿಯುವ ಬೆಂಕಿಯ ಕಿಡಿಯಾಗಿ, ಅಮಾಯಕರ ಅಸಹಾಯಕ ಬದುಕಿಗೆ ಸದಾ ಮಿಡಿಯುತ್ತಿದ್ದ ನ್ಯಾಯಾಧೀಶ, ಬರಹಗಾರ, ಸಾಮಾಜಿಕ ಹೋರಾಟಗಾರ, ಕರ್ನಾಟಕದ ಏಕೀಕರಣದ ರೂವಾರಿ ಚನ್ನಬಸಪ್ಪನವರು ಒಬ್ಬ ಒಳ್ಳೆಯ ಕುಟುಂಬ ಜೀವಿ ಆಗಿಯೂ ನಮಗೆ ಕಲಿಸಿ ಹೋದ ಪಾಠಗಳು ಅತ್ಯಂತ ಮೌಲಿಕವಾದವುಗಳು’ ಎಂದು ಖ್ಯಾತ ಸಾಹಿತಿ, ನ್ಯಾಯಧೀಶರಾಗಿದ್ದ ಕೋ.ಚನ್ನಬಸಪ್ಪ ಅವರ ಮಗಳು ಹಾಗೂ ‘ಚನ್ನಬಸಪ್ಪ ಸಾಹಿತ್ಯ ಮತ್ತು ಶಿಕ್ಷಣ ದತ್ತಿ ಪ್ರತಿಷ್ಠಾನ’ದ ಅಧ್ಯಕ್ಷೆ ಶಾಂತಾ ಜಯಪ್ರಸಾದ್ ಹೇಳಿದ್ದಾರೆ.

ಕನ್ನಡ ಪುಸ್ತಕ ಪ್ರಾಧಿಕಾರ, ಕೋ.ಚನ್ನಬಸಪ್ಪ ಸಾಹಿತ್ಯ ಮತ್ತು ಶಿಕ್ಷಣ ದತ್ತಿ ಪ್ರತಿಷ್ಠಾನಗಳು ತೆಂಕನಿಡಿಯೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಮತ್ತು ಹಿರಿಯಡಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಇವುಗಳ ಸಹಯೋಗದಲ್ಲಿ ಆಯೋಜಿಸಿದ್ದ ‘ಸ್ವಾತಂತ್ರ್ಯಯೋಧ, ಹಿರಿಯ ಸಾಹಿತಿ ಕೋ.ಚನ್ನಬಸಪ್ಪನವರ ಕೃತಿಗಳ ಅವಲೋಕನ’ ಎಂಬ ಒಂದು ದಿನದ ಕಮ್ಮಟವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಕಾರ್ಯಾಗಾರದ ಮೊದಲ ಗೋಷ್ಠಿಯ ಸಂಪನ್ಮೂಲ ವ್ಯಕ್ತಿಯಾಗಿ ‘ಜನಪರ ನ್ಯಾಯಾಧೀಶರಾಗಿ ಕೋ.ಚೆ.’ ಎನ್ನುವ ವಿಷಯದ ಮೇಲೆ ಮಾತನಾಡಿದ ನಿವೃತ್ತ ಪ್ರಾಂಶುಪಾಲ ಡಾ.ದಿನೇಶ್ ಹೆಗ್ಡೆ,ಜನ್ಮತಃ ಜೀವಪರ ನ್ಯಾಯಾಧೀಶರೇ ಆಗಿದ್ದ ಕೋ.ಚೆನ್ನಬಸಪ್ಪ ಅವರು ಜನಸಾಮಾನ್ಯರ ಅನುಭವಗಳನ್ನು ತನ್ನದಾಗಿಸಿಕೊಂಡು ಬದುಕಿದವರು ಮಾತ್ರವಲ್ಲ ಕುವೆಂಪು ಮುಂತಾದವರ ವೈಜ್ಞಾನಿಕ, ವೈಚಾರಿಕತೆಯಿಂದ ಹದಗೊಂಡ ಪ್ರಜ್ಞೆಯಲ್ಲಿ ಲೋಕವನ್ನು ಜಾತಿ, ಲಿಂಗ, ಧರ್ಮದ ಗೋಡೆಯಿಲ್ಲದೆ ಬಯಲಾಗಿಯೇ ಕಂಡವರು’ ಎಂದರು.

ಎರಡನೆಯ ಗೋಷ್ಠಿಯಲ್ಲಿ ‘ಕೋ.ಚೆನ್ನಬಸಪ್ಪ ಅವರ ಸಾಹಿತ್ಯದಲ್ಲಿ ಪ್ರಗತಿಶೀಲತೆ’ ಎಂಬ ವಿಷಯದ ಕುರಿತು ಮಾತನಾ ಡಿದ ಉಜಿರೆ ಎಸ್.ಡಿ.ಎಂ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ರಾಜಶೇಖರ ಹಳೆಮನೆ, ಕೋ. ಚನ್ನಬಸಪ್ಪನವರ ಬರಹಗಳು ಆಲಯವನ್ನು ನಿರಾಕರಿಸಿ ಕನ್ನಡದ ಶರಣ ವಿವೇಕವಾದ ಬಯಲನ್ನು ಅಪ್ಪಿಕೊಂಡವುಗಳು ಮಾತ್ರವಲ್ಲ ವೈಜ್ಞಾನಿಕ, ವೈಚಾರಿಕ ತಳಹದಿಯಲ್ಲಿ ರೂಪುಗೊಂಡ ನೈತಿಕ ರಾಜಕೀಯ ಪ್ರಜ್ಞೆಯುಳ್ಳ ವಿಶ್ವಾತ್ಮಕ ಸರ್ವೋದಯ ಸಮನ್ವಯದ ಸಾಂಸ್ಕೃತಿಕ ಅನ್ವೇಷಣೆಯ ಪ್ರಗತಿಶೀಲ ಮಾದರಿಗಳು ಎಂದು ಅಭಿಪ್ರಾಯಪಟ್ಟರು.

‘ಕರುಣೆಯನ್ನೇ ಧರ್ಮವೆಂಬ ಜೀವಪರ ಸತ್ಯವಾಗಿ ಮಂಡಿಸುವ ಕೋ.ಚೆ. ಬರಹಗಳು ಧರ್ಮಾಂಧತೆಯನ್ನು ರೂಪಿಸುವ ಹುಸಿಧಾರ್ಮಿಕತೆಗೆ ಬದಲಾಗಿ ಪರಮಹಂಸ, ವಿವೇಕಾನಂದ, ಅರವಿಂದ ಹಾಗೂ ಕುವೆಂಪು ಅವರ ಸಾಮಾಜಿಕ ಆಧ್ಯಾತ್ಮ ವನ್ನು ಮುಂದಿಡುತ್ತವೆ ಮತ್ತು ನಿರ್ಲಕ್ಷಿತರ ಬದುಕಿನ ವಿಕಾಸದಲ್ಲಿಯೇ ನಿಜವಾದ ಪ್ರಗತಿಯನ್ನು ಕಾಣುತ್ತವೆ’ ಎಂದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಹಿರಿಯಡಕ ಸ.ಪ್ರ.ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯಪ್ರಕಾಶ್ ಶೆಟ್ಟಿ ಮಾತ ನಾಡಿ, ಕನ್ನಡದಲ್ಲಿ ಗಾಂಧೀ ಮತ್ತು ಕುವೆಂಪು ಇಬ್ಬರನ್ನೂ ಆವಾಹಿಸಿಕೊಂಡು ಬದುಕಿದ ಕೋ.ಚೆ. ‘ಮನುಷ್ಯಜಾತಿ ತಾನೊಂದೆವಲಂ’ ಎಂದ ಪಂಪನ ಮಾತನ್ನು ದಿಟವಾಗಿಯೂ ಬಾಳುವ ಮೂಲಕ ಕನ್ನಡದ ಪಾಲಿನ ನಿಜದ ನಾಡೋಜನಾದವರು’ ಎಂದರು.

ಕಾರ‌್ಯಕ್ರಮದ ಅಧ್ಯಕ್ಷತೆಯನ್ನು ತೆಂಕನಿಡಿಯೂರು ಸ.ಪ್ರ.ದ. ಕಾಲೇಜಿನ ಪ್ರಾಂಶುಪಾಲ ನಿತ್ಯಾನಂದ ವಿ. ಗಾಂವಕರ ವಹಿಸಿದ್ದರು.ಕನ್ನಡ ವಿಭಾಗ ಮುಖ್ಯಸ್ಥೆ ರತ್ನಮಾಲಾ ಸ್ವಾಗತಿಸಿ, ಅರ್ಚನಾ ವಂದಿಸಿದರು. ಶಾಲಿನಿ ಯು.ಬಿ. ಕಾರ್ಯಕ್ರಮ ನಿರೂಪಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X