ತೆಂಗಿನಮರದಿಂದ ಬಾವಿಗೆ ಬಿದ್ದು ವ್ಯಕ್ತಿ ಮೃತ್ಯು

ಕುಂದಾಪುರ: ಬಾವಿಯ ಬಳಿ ಇರುವ ತೆಂಗಿನ ಮರದಿಂದ ತೆಂಗಿನ ಕಾಯಿ ಕೊಯ್ಯಲು ಹತ್ತಿದ್ದ ಕಾಳಾವರ ಗ್ರಾಮದ ಸಲ್ವಾಡಿಯ ಅಣ್ಣಾ ಶೀನ (54) ಎಂಬವರು ಅಕಸ್ಮಿಕವಾಗಿ ಕೈತಪ್ಪಿ ಕಾಲಿ ಜಾರಿ ಕೆಳಗಿನ ಬಾವಿಯ ನೀರಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಇಂದು ಬೆಳಗ್ಗೆ 10:45ರ ಸುಮಾರಿಗೆ ಸಲ್ವಾಡಿಯಲ್ಲಿ ನಡೆದಿದೆ.
ಕಳೆದ ಎರಡು ದಿನಗಳಿಂದ ಶೀನ ಅವರು ಸಲ್ವಾಡಿಯ ಉದಯ ಎಂಬವರ ತೋಟದಲ್ಲಿ ಇತರರೊಂದಿಗೆ ಕೆಲಸ ಮಾಡು ತಿದ್ದು, ಇಂದು ತೆಂಗಿನ ಕಾಯಿ ಕೊಯ್ಯಲು ಮರ ಹತ್ತಿದ್ದಾಗ ಈ ಘಟನೆ ನಡೆದಿದೆ. ಜೊತೆಯಲ್ಲಿದ್ದವರು ತಕ್ಷಣ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಅದರ ಸಹಾಯದಿಂದ ಹುಡುಕಿದಾಗ ಮೃತದೇಹ ಪತ್ತೆಯಾಗಿದೆ.
ಈ ಬಗ್ಗೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





