ಭಾಷಣ ಸ್ಫರ್ಧಾ ವಿಜೇತರಿಗೆ ಬಹುಮಾನ ವಿತರಣೆ

ಕಾಪು, ಜ.25: ರಾಷ್ಟ್ರೀಯ ಯುವ ದಿನಾಚರಣೆಯ ಅಂಗವಾಗಿ ಜೇಸಿಐ ಕಟಪಾಡಿ ವತಿಯಿಂದ ಕಾಪು ತಾಲೂಕು ವ್ಯಾಪ್ತಿಯ ಗ್ರಾಮೀಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾದ ದಾರ್ಶನಿಕ ವೇದಾಂತಿ ಸ್ವಾಮಿ ವಿವೇಕಾನಂದರ ಆದರ್ಶ ಹಾಗೂ ಚಿಂತನೆಗಳು ಕನ್ನಡ ಭಾಷಣ ಸ್ಫರ್ಧಾ ವಿಜೇತರಿಗೆ ಗುರುವಾರ ಕಟಪಾಡಿ ಎಸ್‌ವಿಎಸ್ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಬಹುಮಾನ ವಿತರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಕಟಪಾಡಿ ಎಸ್‌ವಿಎಸ್ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ಕೆ.ದಯಾನಂದ ಪೈ ವಿಜೇತ ರಿಗೆ ಬಹುಮಾನ ವಿತರಿಸಿದರು. ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಮಾತನಾಡಿದರು. ಎಸ್‌ವಿಎಸ್ ಪ್ರೌಢ ಶಾಲಾ ವಿಭಾಗದ ಮುಖ್ಯಸ್ಥ ಸುಬ್ರಹ್ಮಣ್ಯ ತಂತ್ರಿ, ನಿವೃತ್ತ ಶಿಕ್ಷಕ ರಾಜಗೋಪಾಲಾಚಾರ್ಯ ಉಡುಪಿ, ನಿವೃತ್ತ ಮುಖ್ಯ ಶಿಕ್ಷಕಿ ಮುಕ್ತಾ ಶೆಣೈ, ಐಪಿಪಿ ಪ್ರಶಾಂತ್ ಆರ್.ಎಸ್. ಉಪಸ್ಥಿತರಿದ್ದರು.
ಜೇಸಿ ಪೂರ್ವಾಧ್ಯಕ್ಷ ಮಹೇಶ್ ಅಂಚನ್ ಸ್ಫರ್ಧಾ ವಿಜೇತರನ್ನು ಪರಿಚಯಿಸಿದರು. ಕಟಪಾಡಿ ಜೇಸಿಐ ಸಂಸ್ಥೆಯ ಅಧ್ಯಕ್ಷೆ ರಂಜಿತಾ ಶೇಟ್ ಸ್ವಾಗತಿಸಿದರು. ಕಾರ್ಯಕ್ರಮ ನಿರ್ದೇಶಕ ಕೃಷ್ಣಕುಮಾರ್ ರಾವ್ ಮಟ್ಟು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಸ್ಫರ್ಧಾ ವಿಜೇತರು: ಪ್ರ-ಸಮರ್ಥ್ ಜೋಷಿ(ದಂಡತೀರ್ಥ ಪದವಿ ಪೂರ್ವ ಕಾಲೇಜು), ದ್ವಿ-ಪ್ರಜ್ಞಾ(ತ್ರಿಶಾ ವಿದ್ಯಾಲಯ ಕಟಪಾಡಿ), ತೃ-ನವ್ಯಶ್ರೀ (ಸರಕಾರಿ ಪದವಿ ಪೂರ್ವ ಕಾಲೇಜು ಪಡುಬಿದ್ರಿ), ಸಮಾಧಾನಕರ: ಮಹೇಶ್ವರೀ ಕಟಪಾಡಿ, ಜಿ.ಬೇಬಿ ಪಡುಬಿದ್ರಿ, ವೈಷ್ಣವಿ ಸಾಮಗ ಕಟಪಾಡಿ, ಸುಮಯ್ಯ ಬಾನು ಕಟಪಾಡಿ.







