ಮೊಬೈಲ್ ಟವರ್ ಕಳವು: ಪ್ರಕರಣ ದಾಖಲು

ಮಲ್ಪೆ, ಜ.25: ಕಲ್ಯಾಣಪುರದಲ್ಲಿ ಅಳವಡಿಸಲಾದ ಜಿಟಿಎಲ್ ಮೊಬೈಲ್ ಕಂಪೆನಿಗೆ ಸೇರಿದ ಮೊಬೈಲ್ ಟವರ್ ಕಳವಾಗಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟವರ್ ನಿರ್ಮಿಸಿದ ಸ್ಥಳದಲ್ಲಿ ಪರಿಶೀಲನೆ ಮಾಡಿದಾಗ ಕಳ್ಳರು ಮೊಬೈಲ್ ಟವರನ್ನು ಕಳವು ಮಾಡಿಕೊಂಡು ಹೋಗಿರುವುದು ಕಂಡುಬಂದಿದೆ. ಕಳವಾದ ಸೊತ್ತಿನ ಮೌಲ್ಯ 36,92,992ರೂ. ಎಂದು ಅಂದಾಜಿಸಲಾಗಿದೆ.
Next Story





