ಶಶಿರಾಜ್ ಗೆ ಪಿಎಚ್.ಡಿ. ಪದವಿ ಪ್ರದಾನ

ಉಡುಪಿ, ಜ.27: ಕಾಸರಗೋಡು ಕೇಂದ್ರೀಯ ವಿಶ್ವವಿದ್ಯಾಲಯ ಸಹ ಪ್ರಾದ್ಯಾಪಕ ಡಾ.ಬಿನೋಯ್ ಟಿ.ಎ. ಮಾರ್ಗ ದರ್ಶನದಲ್ಲಿ ಶಶಿರಾಜ್ ಯು. ಇಂಪ್ಯಾಕ್ಟ್ ಆಫ್ ಮಾರ್ಕೆಟ್ ಸೆಗ್ಡೆಂಟೇಷನ್, ಟಾರ್ಗೆಟಿಂಗ್ ಆಂಡ್ ಪೊಸಿಷನಿಂಗ್ ಆನ್ ಮೆಡಿಕಲ್ ಟೂರಿಸಂ ಎ ಸ್ಟಡಿ ಇನ್ ಕರ್ನಾಟಕ ಎಂಬ ವಿಷಯದಲ್ಲಿ ಮಂಡಿಸಿರುವ ಮಹಾಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯ ಪಿಎಚ್.ಡಿ. ಪದವಿ ನೀಡಿದೆ.
ಇವರು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ ವಾರಂಬಳ್ಳಿ ಗ್ರಾಮ, ಬಿರ್ತಿಯ ಸೋಮಪ್ಪ ಎ. ಮತ್ತು ಬೇಬಿ ಯು. ದಂಪತಿ ಪುತ್ರರಾಗಿದ್ದು ಪ್ರಸ್ತುತ ಶಿವಮೊಗ್ಗ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕ ರಾಗಿ, ಪ್ರವಾಸೊದ್ಯಮ ಆಡಳಿತ ವಿಭಾಗದ ಮುಖ್ಯಸ್ಥರಾಗಿ ಹಾಗೂ ಕಾಲೇಜಿನ ಎನ್.ಸಿ.ಸಿ. ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
Next Story





