ಕೋಡಿ: ಸೀ ವಾಕ್ ಬಳಿ ಸಾರ್ವಜನಿಕ ಶೌಚಾಲಯ ಉದ್ಘಾಟನೆ
ಕುಂದಾಪುರ, ಜ.27: ಪ್ರವಾಸಿ ತಾಣ ಕೋಡಿ ಸೀವಾಕ್ ಬಳಿ ನೂತನವಾಗಿ ನಿರ್ಮಿಸಲಾಗಿರುವ ಸಾರ್ವಜನಿಕ ಶೌಚಾಲಯ ವನ್ನು ಕುಂದಾಪುರ ಪುರಸಭೆ ಅಧ್ಯಕ್ಷ ಕೆ.ಮೋಹನದಾಸ ಶೆಣೈ ಸೋಮವಾರ ಉದ್ಘಾಟಿಸಿದರು.
ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಆನಂದ ಜೆ. ಮಾತನಾಡಿ, ಸ್ವಚ್ ಭಾರತ್ ಮಿಷನ್ ಯೋಜನೆ ಅಡಿಯಲ್ಲಿ ಸುಮಾರು 25 ಲಕ್ಷ ವೆಚ್ಚದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಿದ್ದು ಮಹಿಳೆಯರು, ಪುರುಷರು ಹಾಗೂ ವಿಶೇಷ ಚೇತನರಿಗೆ 2 ಶೌಚಾಲಯ ನಿರ್ಮಿಸಲಾಗಿದೆ. ಸದ್ಯ ಪುರಸಭೆ ಇದರ ನಿರ್ವಹಣೆ ಮಾಡಲಿದ್ದು ಮುಂದಿನ ದಿನಗಳಲ್ಲಿ ಪೇ ಆಂಡ್ ಯೂಸ್ ಮಾದರಿ ಮಾಡುವ ಚಿಂತನೆಯಿದೆ ಎಂದರು.
ಕುಂದಾಪುರ ಪುರಸಭೆ ಉಪಾಧ್ಯಕ್ಷೆ ವನಿತಾ ಬಿಲ್ಲವ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭಾಕರ ವಿ., ಪುರಸಭೆ ಸದಸ್ಯರಾದ ಲಕ್ಷ್ಮೀ ಬಾಯಿ ಕೋಡಿ, ಕಮಲ ಮಂಜುನಾಥ, ದೇವಕಿ ಸಣ್ಣಯ್ಯ, ಶೇಖರ್ ಪೂಜಾರಿ, ಸ್ಥಳೀಯರಾದ ಶಂಕರ್ ಪೂಜಾರಿ, ಕೋಡಿ ಗೋಪಾಲ ಪೂಜಾರಿ, ಸುನಿಲ್ ಪೂಜಾರಿ ಕೋಡಿ, ಮೋಹನ ಎಂ. ಕುಂದರ್, ನಾಗರಾಜ್ ಕಾಂಚನ ಕೋಡಿ, ತಿಮ್ಮಪ್ಪ ಖಾರ್ವಿ ಕೋಡಿ, ಗುತ್ತಿಗೆದಾರ ಚಂದ್ರಹಾಸ, ಪುರಸಭೆ ಪರಿಸರ ಅಭಿಯಂತರ ಗುರುಪ್ರಸಾದ್ ಶೆಟ್ಟಿ, ಹಿರಿಯ ಆರೋಗ್ಯ ನಿರೀಕ್ಷಕ ರಾಘವೇಂದ್ರ ಎಂ. ನಾಯಕ್, ಕಿರಿಯ ಅಭಿಯಂತರೆ ನಯನತಾರ, ಪುರಸಭೆಯ ಅಧಿಕಾರಿ ಗಣೇಶ್ ಕುಮಾರ್ ಜನ್ನಾಡಿ ಮೊದಲಾದವರು ಉಪಸ್ಥಿತರಿದ್ದರು.









