ಮಣಿಪಾಲ: ಎಂಎಸ್‌ಎಂಇಗಳಿಗೆ ತರಬೇತಿ ಕಾರ್ಯಕ್ರಮ

ಉಡುಪಿ, ಜ.29: ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಕರ್ನಾಟಕ ತಾಂತ್ರಿಕ ಸಲಹೆ ಸೇವಾ ಸಂಸ್ಥೆ ಬೆಂಗಳೂರು, ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಜಿಲ್ಲಾ ಸಣ್ಣ ಕೈಗಾರಿಕಾ ಸಂಘ ಮಣಿಪಾಲ ಉಡುಪಿ ಇವರ ಸಹಯೋಗ ದೊಂದಿಗೆ ಎಂ.ಎಸ್.ಎಂ.ಇ.ಗಳಿಗೆ ಆರ್.ಎ.ಎಂ.ಪಿ ಯೋಜನೆಯಡಿ ಟಿ.ಆರ್.ಇ.ಡಿ.ಎಸ್ ಮತ್ತು ಇ.ಎಸ್.ಎಂ ಬಗ್ಗೆ ತರಬೇತಿ ಕಾರ್ಯಕ್ರಮ ಇತ್ತೀಚೆಗೆ ಮಣಿಪಾಲದ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಹರೀಶ್ ಕುಂದಾರ್ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಕೆ.ಕೆ.ಫಿಶ್‌ನೆಟ್ ಮಾಲೀಕ ಹಾಗೂ ಕೆ.ಎ.ಎ.ಎಸ್.ಐ.ಎ ಪ್ರತಿನಿಧಿ ಪ್ರಶಾಂತ್ ಬಾಳಿಗ ಮಾತನಾಡಿದರು.
ಜಿಲ್ಲಾ ವ್ಯವಸ್ಥಾಪಕ ಹರೀಶ್ ಮಾತನಾಡಿ, ಕೌಶಲ್ಯ, ಜ್ಞಾನ ಮತ್ತು ತಾಳ್ಮೆಯನ್ನು ನಮ್ಮ ಜೀವನದಲ್ಲಿ ಹೆಚ್ಚಿಸಿಕೊಂಡು, ನಮ್ಮಲ್ಲಿರುವ ಉತ್ತಮ ಗುಣಗಳನ್ನು ಬೆಳೆಸುವುದರ ಮೂಲಕ ನಾವು ಯಶಸ್ವಿ ಉದ್ಯಮಿಗಳಾಗಿ ಈ ಸಮಾಜಕ್ಕೆ ಒಳ್ಳೆಯ ಕೊಡುಗೆಯಾಗಬಹುದು ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಕೃಷ್ಣಮೂರ್ತಿ ಎಚ್.ಎಸ್. ಮಾಹಿತಿ ನೀಡಿದರು. ಅಧ್ಯಕ್ಷತೆಯನ್ನು ಜಿಲ್ಲಾ ಸಣ್ಣ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ನಾಗರಾಜ್ ವಿ.ನಾಯಕ್ ವಹಿಸಿದ್ದರು. ಜಿಲ್ಲಾ ಸಣ್ಣ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಸೀತಾರಾಮ್ ಶೆಟ್ಟಿ, ಜಿಲ್ಲಾ ಸಣ್ಣ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ವಾಮನ್ ನಾಯ್ಕ್, ಪವರ್ ಅಧ್ಯಕ್ಷೆ ತನುಜ ಮ್ಯಾಬೆನ್, ಸಚಿನ್ ಆರ್.ಚಂದ್ರ ಮೊದಲಾದವರು ಉಪಸ್ಥಿತರಿದ್ದರು.







