ಸರಸ್ವತಿ ಸಾಧಕ ಸಿರಿ ಪ್ರಶಸ್ತಿ ಆಯ್ಕೆ

ಉಡುಪಿ: ದಾವಣಗೆರೆಯ ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಟಾನದ ವತಿಯಿಂದ ಕನ್ನಡ ನಿತ್ಯೋತ್ಸವದ ಪ್ರಯುಕ್ತ ನೀಡುವ ಸರಸ್ವತಿ ಸಾಧಕ ಸಿರಿ ರಾಷ್ಟ್ರ ಪ್ರಶಸ್ತಿಗೆ ಮಾಯಾ ಕಾಮತ್ ಈಶ್ವರನಗರ ಮಣಿಪಾಲ ಆಯ್ಕೆಯಾಗಿದ್ದಾರೆ.
ಎ.27ರಂದು ಚನ್ನಗಿರಿಯ ವಿರೂಪಾಕ್ಷಪ್ಪ ಧರ್ಮಶಾಲಾ ಕಲ್ಯಾಣಮಂಟಪ, ದಾವಣಗೆರೆಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಪ್ರತಿಷ್ಟಾನದ ಅಧ್ಯಕ್ಷ ಡಾ.ನಾಗೇಶ್ ಕಿಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story