ವೆಲ್ಫೇರ್ ಪಾರ್ಟಿ ಉಡುಪಿ ಜಿಲ್ಲಾಧ್ಯಕ್ಷರಾಗಿ ಇದ್ರೀಸ್ ಹೂಡೆ

ಇದ್ರೀಸ್ ಹೂಡೆ
ಉಡುಪಿ, ಫೆ.4: ವೆಲ್ಫೇರ್ ಪಾರ್ಟಿ ಉಡುಪಿ ಜಿಲ್ಲಾಧ್ಯಕ್ಷರಾಗಿ ಇದ್ರಿಸ್ ಹೂಡೆ, ಜಿಲ್ಲಾ ಉಪಾಧ್ಯಕ್ಷರಾಗಿ ವಿಜಯ್ ಪಡುಕುದ್ರು, ಅಬ್ದುಲ್ ಅಝೀಜ್ ಉದ್ಯಾವರ, ಸಯ್ಯದ್ ಫರೀದ್ ಆಯ್ಕೆಯಾಗಿದ್ದಾರೆ.
ಹೂಡೆಯ ಆದರ್ಶ್ ಇಸ್ಲಾಮಿಕ್ ಸೆಂಟರ್ನಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯಾಧ್ಯಕ್ಷ ಅಡ್ವಕೇಟ್ ತಾಹೀರ್ ಹುಸೇನ್ ನೇತೃತ್ವದಲ್ಲಿ ನಡೆದ ಉಡುಪಿ ಜಿಲ್ಲಾ ಸಮಿತಿ ಸದಸ್ಯರ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು.
ಪ್ರಧಾನ ಕಾರ್ಯದರ್ಶಿಯಾಗಿ ಯಾಸೀನ್, ಉಪಾಧ್ಯಕ್ಷರಾಗಿ ವಿಜಯ ಪಡುಕುದ್ರು, ಅಬ್ದುಲ್ ಅಝೀಝ್ ಉದ್ಯಾವರ, ಸಯ್ಯದ್ ಫರೀದ್, ಕಾರ್ಯದರ್ಶಿ ಗಳಾಗಿ ಶಾಹಜಹಾನ್ ತೋನ್ಸೆ, ಮಮ್ತಾಝ್ ಬೇಗಮ್, ಖಜಾಂಚಿಯಾಗಿ ಆಸೀಫ್ ಜಿಡಿ, ಮಾಧ್ಯಮ ಕಾರ್ಯದರ್ಶಿಯಾಗಿ ಶಾರೂಕ್ ತೀರ್ಥಹಳ್ಳಿ ಅವರನ್ನು ಆಯ್ಕೆ ಮಾಡಲಾಯಿತು.
ತೆರವುಗೊಂಡಿದ್ದ ಹೂಡೆ ಘಟಕದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಅಫ್ವಾನ್ ಹೂಡೆ, ಸಂಘಟನಾ ಕಾರ್ಯದರ್ಶಿ ಸ್ಥಾನಕ್ಕೆ ಝೈನುಲ್ಲಾ ಹೂಡೆ ಆಯ್ಕೆಯಾದರು. ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿಗಳಾದ ಕೆ.ಟಿ.ಬಶೀರ್, ರಿಝ್ವಾನ್ ಹುಮ್ನಾಬಾದ್ ಮೊದಲಾದವರು ಉಪಸ್ಥಿತರಿದ್ದರು.