ಕುಂದಾಪುರ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಡ್ರೈವರ್‌ಗಳೇ ಇಲ್ಲ: ಶಾಸಕ ಗಂಟಿಹೊಳೆ ಆರೋಪ

ಬೈಂದೂರು, ಫೆ.5: ಕುಂದಾಪುರ ಕೆಎಸ್‌ಆರ್‌ಟಿಸಿ ಡಿಪೋದಲ್ಲಿ 16 ಬಸ್ ಗಳು ಚಾಲಕರ ಕೊರತೆಯಿಂದ ಓಡಾಟ ಮಾಡುತ್ತಿಲ್ಲ ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಆರೋಪಿಸಿದ್ದಾರೆ.
ಕುಂದಾಪುರ ಡಿಪೋ ಒಂದರಲ್ಲಿ ಚಾಲಕರ ಕೊರತೆಯಿಂದ 16 ಬಸ್ ಓಡಾಟ ಮಾಡುತ್ತಿಲ್ಲ. ಸಾರಿಗೆ ಸಚಿವರು ಇದನ್ನು ಗಂಭೀರವಾಗಿ ಪರಿಗಣಿಸಿ ಬಸ್ ಡ್ರೈವರ್ ನೇಮಕಾತಿ ಮಾಡಬೇಕು. ಕುಂದಾಪುರ ಡಿಪೋದಲ್ಲಿ 45ಕ್ಕೂ ಅಧಿಕ ಮಂಜೂ ರಾದ ಹುದ್ದೆ ಇದ್ದರೂ ಒಂದು ಭರ್ತಿ ಮಾಡಿಕೊಂಡಿಲ್ಲ. ಬಸ್ ಕೂಡ ಓಡಾಡುತ್ತಿಲ್ಲ. ಚಾಲಕ ನಿರ್ವಾಹಕರ ನೇಮಕಾತಿಯೂ ಮಾಡುತ್ತಿಲ್ಲ. ಆದಷ್ಟು ಬೇಗ ಹುದ್ದೆ ಭರ್ತಿ ಮಾಡಿ ಬಸ್‌ಗಳನ್ನು ಪೂರ್ಣ ಪ್ರಮಾಣದಲ್ಲಿ ಓಡಿಸಬೇಕು ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
Next Story