ಶಾಲಾ ಮೈದಾನದಲ್ಲಿ ವ್ಹೀಲಿಂಗ್: ಸೊತ್ತುಗಳಿಗೆ ಹಾನಿ; ಪ್ರಕರಣ ದಾಖಲು

ಕೊಲ್ಲೂರು, ಫೆ.8: ಕೊಲ್ಲೂರು ಶ್ರೀಮೂಕಾಂಬಿಕಾ ಫ್ರೌಡಶಾಲೆಯ ಆಟದ ಮೈದಾನದಲ್ಲಿ ಜೀಪ್ ವ್ಹೀಲಿಂಗ್ ಮಾಡಿ ಸೊತ್ತುಗಳನ್ನು ಹಾನಿಗೈದಿರುವ ಘಟನೆ ಫೆ.7ರಂದು ರಾತ್ರಿ 9ಗಂಟೆ ಸುಮಾರಿಗೆ ನಡೆದಿದೆ.
ಕೌಶಿಕ ಎಂಬಾತ ತನ್ನ ಜೀಪನ್ನು ಶಾಲಾ ಆಟದ ಮೈದಾನಕ್ಕೆ ಚಲಾಯಿಸಿ ಕೊಂಡು ಬಂದು, ಆಟದ ಮೈದಾನದಲ್ಲಿ ವೇಗ ವ್ಹೀಲಿಂಗ್ ಮಾಡಿದ ಪರಿಣಾಮ, ಶಾಲಾ ಆಟದ ಮೈದಾನದ ಒಳಚರಂಡಿಗೆ ಮುಚ್ಚಿದ ಸಿಮೆಂಟ್ ಹಲಗೆ ಹಾಗೂ ಟ್ರಾಕ್‌ನ ಒಳಪಟ್ಟಿಗೆ ಹಾನಿಯಾಗಿದೆ. ಇದರಿಂದ ಒಟ್ಟು 50,000ರೂ. ನಷ್ಟ ಉಂಟಾಗಿದೆ ಎಂದು ದೂರಲಾಗಿದೆ.
ಈ ಬಗ್ಗೆ ಶಾಲಾ ಮುಖ್ಯ ಶಿಕ್ಷಕ ನಾಗರಾಜ್ ನೀಡಿದ ದೂರಿನಂತೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





