ರಾಷ್ಟ್ರೀಯ ಮಟ್ಟದ ಕರಾಟೆ: ಮಹಾಲಕ್ಷ್ಮೀ ವಿದ್ಯಾರ್ಥಿಗಳ ಸಾಧನೆ

ಕಾಪು, ಫೆ.10: ಕುಬುಡೋ ಬುಡೋಕಾನ್ ಕರಾಟೆ ಡು ಅಸೋಸಿಯೇಶನ್ ಕರ್ನಾಟಕ ಇವರ ಆಶ್ರಯದಲ್ಲಿ ಇತ್ತೀಚೆಗೆ ಉದ್ಯಾವರ ಗ್ರಾಪಂ ಕ್ರೀಡಾಂಗಣ ದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಉಚ್ಚಿಲ ಮಹಾಲಕ್ಷ್ಮೀ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಮುಹಮ್ಮದ್ ಶಾಝ್ ಕಂಚು, ಮುಹಮ್ಮದ್ ಆರೀಫ್ ಬೆಳ್ಳಿ, ವಿಷ್ಣು ವಿ.ಬೆಲ್ಚಡ ಕಂಚು, ವಿಭಾ ಶೆಟ್ಟಿ ಬೆಳ್ಳಿ, ಮುಹಮ್ಮದ್ ಆಹೀಲ್ ಎರಡು ಕಂಚು, ಪ್ರಜ್ಞಾ ಕಂಚು, ಕೃತಿ ಪುತ್ರನ್ ಕಂಚು, ಮುಹಮ್ಮದ್ ಇಶಾನ್ ಕಂಚು, ಶ್ವೇತಾ ಆಚಾರ್ಯ ಕಂಚು, ಮುಹಮ್ಮದ್ ಫರ್ದೀನ್ ಶಾಹ ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾರೆ.
ಸಾಧಕ ವಿದ್ಯಾರ್ಥಿಗಳನ್ನು ಸಂಸ್ಥೆಯ ಸಂಚಾಲಕ ಗಂಗಾಧರ್ ಎಚ್.ಹೊಸ ಬೆಟ್ಟು, ಅಧ್ಯಕ್ಷ ಸರ್ವೋತ್ತಮ ಕುಂದರ್, ಶಾಲಾ ಮುಖ್ಯೋಪಾಧ್ಯಾಯಿನಿ ನವ್ಯ, ಉಪ ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮೀ ಜೆ.ಶೆಟ್ಟಿ ಅಭಿನಂದಿಸಿದ್ದಾರೆ. ಇವರು ಕರಾಟೆ ಶಿಕ್ಷಕ ಶಂಶುದ್ದೀನ್ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ.
Next Story





