ಕಾಪು ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟ

ಕಾಪು, ಫೆ.11: ಭಾರತ ಸರ್ಕಾರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಉಡುಪಿ ಹಾಗೂ ಬೆಳಪು ಸ್ಪೋರ್ಟ್ಸ್‌ಗಳ ಜಂಟಿ ಆಶ್ರಯದಲ್ಲಿ ಕಾಪು ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟವು ರವಿವಾರ ಬೆಳಪು ಗ್ರಾಪಂ ಕ್ರೀಡಾಂಗಣದಲ್ಲಿ ಜರಗಿತು.
ಕ್ರೀಡಾಕೂಟವನ್ನು ಬೆಳಪು ಗ್ರಾಪಂ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಉದ್ಘಾಟಿಸಿದರು. ಬೆಳಪು ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಶಾನವಾಝ್ ಫಜಲುದ್ದೀನ್ ಅಧ್ಯಕ್ಷತೆ ವಹಿಸಿದ್ದರು. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮೈ ಭಾರತ್ ನೆಹರು ಯುವ ಕೇಂದ್ರದ ಉಪನಿರ್ದೇಶಕ ಲೋಕೇಶ್ ಕುಮಾರ್, ಕಾಪು ತಾಲೂಕು ಯುವಜನ ಸೇವಾ ಅಧಿಕಾರಿ ರಿತೇಶ್ ಶೆಟ್ಟಿ ಸೂಡ, ಕಾಪು ರೋಟರಿ ಕ್ಲಬ್ ಅಧ್ಯಕ್ಷ ಬಾಲಕೃಷ್ಣ ಎಸ್.ಆಚಾರ್ಯ, ಕೋಟ ರಾಮಕೃಷ್ಣ ಆಚಾರ್ಯ, ಅರ್ಷದ್ ಅಹಮದ್, ಬೆಳಪು ಅಂಬೇಡ್ಕರ್ ಯುವಕ ಮಂಡಲ ಅಧ್ಯಕ್ಷ ರವಿ ಜಿ.ಬೆಳಪು ಉಪಸ್ಥಿತರಿದ್ದರು.
ಜಮೀಯ್ಯತುಲ್ ಫಲಾಹ್ ಕಾಪು ಅಧ್ಯಕ್ಷ ಶಭಿ ಅಹ್ಮದ್ ಖಾಜಿ ಹಾಗೂ ಬೆಳಪು ಬಿಲ್ಲವರ ಸಂಘದ ಅಧ್ಯಕ್ಷ ಯೋಗೀಶ್ ಪೂಜಾರಿ ಶುಭ ಹಾರೈಸಿದರು.
ಸಮಾರೋಪ ಸಮಾರಂಭ: ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಉದ್ಯಮಿ ಮುಸ್ತಾಕ್ ಸಾಹೇಬ್, ಬೆಳಪು ಸರಕಾರಿ ಸಂಯುಕ್ತ ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಅಬ್ದುಲ್ ರಜಾಕ್ ಬಿ.ಎಂ., ಸಂಸ್ಥೆಯ ಉಪಾಧ್ಯಕ್ಷ ಸಾಹಿದ್ ನವಾಜ್, ಕಾರ್ಯದರ್ಶಿ ಉಸ್ಮಾನ್ ಘನಿ, ಕ್ರೀಡಾ ಕಾರ್ಯದರ್ಶಿ ರಾಜೇಶ್ ಆಚಾರ್ಯ, ಜಂಟಿ ಕಾರ್ಯದರ್ಶಿ ಅಸದ್ ಅಲಿ, ಸಂಘಟನಾ ಕಾರ್ಯದರ್ಶಿ ಶಮೀಮ್ ಕುಶ್ದಿಲ್, ಆದಿಲ್ ಜಲೀಲ್, ಹಾಗೂ ಸಮಿತಿ ಸಲಹೆಗಾರರಾದ ಶಾನವಾಜ್ ನೂರುಲ್ಲಾ, ಶೇಖ್ ಖಾಲಿದ್ ಅಹಮದ್, ಸೈಯದ್ ಅಹಮದ್ ಅಂಜಲಬೆಟ್ ಉಪಸ್ಥಿತರಿದ್ದರು. ರಾಜೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
ವಿವಿಧ ಸ್ಪರ್ಧೆಯ ಫಲಿತಾಂಶ
ಪುರುಷರ ವಿಭಾಗ:- ವಾಲಿಬಾಲ್: ಪ್ರ-ಎಲ್ಲೂರು ಫ್ರೆಂಡ್ಸ್ ಕ್ಲಬ್, ದ್ವಿ- ದುರ್ಗಾ ಪಣಿಯೂರು. ಬ್ಯಾಡ್ಮಿಂಟನ್: ಪ್ರ-ಭಾವಿತ್ ಕುಂಜೂರ್, ದ್ವಿ- ದೀಕ್ಷಿತ್ ಕೆ. ಭಾರ ಎತ್ತುವ ಸ್ಪರ್ಧೆ: ಪ್ರ- ಕಾರ್ತಿಕ್ ಮಣಿಪುರ
ಮಹಿಳೆಯರ ವಿಭಾಗ:- ಖೋ ಖೋ: ಪ್ರ-ಟೀಮ್ ಮಣಿಪುರ, ದ್ವಿ- ಟೀಮ್ ಎರ್ಮಾಳ್. 100ಮೀ ಓಟ:- ಪ್ರ-ರಿಂಕು, ದ್ವಿ-ವೀಣಾ. ಸ್ಲೋ ಸೈಕಲ್ ಸ್ಪರ್ಧೆ: ಪ್ರ- ಪದ್ಮಶ್ರೀ, ದ್ವಿ- ಅರ್ಪಿತಾ.







