ಉಡುಪಿ ಜಯಂಟ್ಸ್ ಗ್ರೂಪ್ ಪದಾಧಿಕಾರಿಗಳ ಪದಗ್ರಹಣ

ಉಡುಪಿ, ಫೆ.11: ಉಡುಪಿ ಜಯಂಟ್ಸ್ ಗ್ರೂಪಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಇತ್ತೀಚೆಗೆ ಉಡುಪಿ ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ಜರಗಿತು.
ಜಯಂಟ್ಸ್ ವೆಲ್ಫೇರ್ ಫೌಂಡೇಶನ್‌ನ ಡೆಪ್ಯುಟಿ ವರ್ಲ್ಡ್ ಚೇಯರ್‌ಮೆನ್ ಎಂ.ಲಕ್ಷ್ಮಣನ್, ನೂತನ ಅಧ್ಯಕ್ಷ ವಿನಯ್ ಕುಮಾರ್ ಪೂಜಾರಿ, ಉಪಾಧ್ಯಕ್ಷರಾದ ರೋಶನ್ ಬಲ್ಲಾಳ್, ಗಣೇಶನ್ ಉರಾಲ್, ಆಡಳಿತ ನಿರ್ದೇಶಕ ದಿವಾಕರ್ ಪೂಜಾರಿ, ಆಡಳಿತದ ಜಂಟಿ ನಿರ್ದೇಶಕ ಡಯಾನಾ ಸುಪ್ರಿಯಾ, ಹಣಕಾಸು ನಿರ್ದೇಶಕ ವಾದಿರಾಜ್ ಸಾಲಿಯಾನ್, ಹಣಕಾಸು ಜಂಟಿ ನಿರ್ದೇಶಕ ದಯಾನಂದ ಶೆಟ್ಟಿ, ನಿರ್ದೇಶಕರಾದ ರಾಜೇಶ್ ಶೆಟ್ಟಿ, ಚಿದಾನಂದ ಪೈ, ಜಗದೀಶ್ ಅಮೀನ್, ವಿನ್ಸೆಂಟ್ ಸಲ್ಡಾನಾ, ನವೀನ್ ಚಂದ್ರ, ರೇಖಾ ಪೈ, ಗಣೇಶ್ ಶೆಟ್ಟಿಗಾರ್ ಅವರಿಗೆ ಪ್ರಮಾಣ ವಚನ ಬೋಧಿಸಿದರು.
ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ್ ಪೂಜಾರಿ, ಫೌಂಡೇಶನ್‌ನ ಕೇಂದ್ರ ಸಮಿತಿಯ ಸದಸ್ಯ ದಿನಕರ್ ಕೆ ಅಮೀನ್, ಹಿರಿಯ ಪತ್ರಕರ್ತ ಎಸ್.ನಿತ್ಯಾನಂದ ಪಡ್ರೆ, ಫೌಂಡೇಶ್‌ನನ ವಿಶೇಷ ಸಮಿತಿ ಸದಸ್ಯ ಮೋಹನ್ ಕರೇಕರ್ ಮತ್ತು ಫೆಡರೇಶನ್ 6 ಇದರ ಅಧ್ಯಕ್ಷ ತೇಜೇಶ್ವರ ರಾವ್ ಮುಖ್ಯ ಅತಿಥಿಗಳಾಗಿದ್ದರು.
ಜಯಂಟ್ಸ್‌ನ ಗ್ರೂಪ್ ಆಫ್ ಉಡುಪಿ ಮಾಜಿ ಅಧ್ಯಕ್ಷ ದಿನೇಶ್ ಪುತ್ರನ್ ಮತ್ತು ಎಂ.ಇಕ್ಬಾಲ್ ಮನ್ನಾ ಉಪಸ್ಥಿತರಿದ್ದರು. ನಿರ್ಗಮನ ಆಡಳಿತ ನಿರ್ದೇಶಕ ವಾದಿರಾಜ್ ಸಾಲಿಯನ್ ವಾರ್ಷಿಕ ವರದಿಯನ್ನು ಮಂಡಿಸಿದರು. ನಿರ್ಗಮನ ಅಧ್ಯಕ್ಷ ಯಶ್‌ವಂತ್ ಸಾಲಿಯನ್ ಸ್ವಾಗತಿಸಿದರು. ಡಯಾನಾ ಸುಪ್ರಿಯಾ ವಂದಿಸಿದರು.







