ಉಡುಪಿ: ಗ್ರಾಮ ಆಡಳಿತ ಅಧಿಕಾರಿಗಳ ಧರಣಿ ಮೂರನೇ ದಿನಕ್ಕೆ

ಉಡುಪಿ, ಫೆ.11: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗ್ರಾಮ ಆಡಳಿತ ಅಧಿಕಾರಿಗಳು ಉಡುಪಿ ಜಿಲ್ಲೆಯ ಏಳು ತಾಲೂಕು ಕಚೇರಿಗಳ ಎದುರು ನಡೆಸುತ್ತಿರುವ ಮುಷ್ಕರ ಎರಡನೆ ದಿನವಾದ ಮಂಗಳವಾರವೂ ಮುಂದುವರೆದಿದೆ.
ಕುಂದಾಪುರದ ಮಿನಿ ವಿಧಾನಸೌಧದ ಎದುರು ನಡೆಯುತ್ತಿರುವ ಮುಷ್ಕರದಲ್ಲಿ ಕಂದಾಯ ಇಲಾಖೆ ಸರಕಾರಿ ನೌಕರರ ಸಂಘ ಬೆಂಬಲ ಸೂಚಿಸಿ ಭಾಗವಹಿಸಿ ದರು. ಕಂದಾಯ ಇಲಾಖೆ-ಸರ್ಕಾರಿ ನೌಕರರ ಸಂಘದ ರಾಘವೇಂದ್ರ ಡಿ., ಕಾರ್ಯದರ್ಶಿ ಅಶೋಕ್, ಸರಕಾರಿ ನೌಕರರ ಸಂಘದ ತಾಲೂಕು ಖಜಾಂಚಿ ಕಾಂತರಾಜು, ಉಪತಹಶಿಲ್ದಾರ್ರಾದ ವಿನಯ್, ಚಂದ್ರ ಶೇಖರ್, ಕುಂದಾಪುರ ಕಂದಾಯ ನಿರೀಕ್ಷಕ ದಿನೇಶ್ ಹುದ್ದಾರ್, ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಭರತ್ ಶೆಟ್ಟಿ, ಕುಂದಾಪುರ ತಾಲೂಕು ಸಂಘದ ಅಧ್ಯಕ್ಷ ಪ್ರಕಾಶ್ ರಾಥೋಡ್, ಉಪಾಧ್ಯಕ್ಷ ಆನಂದ ಕುಮಾರ್, ಕಾರ್ಯದರ್ಶಿ ವಿಶ್ವನಾಥ, ರಾಜ್ಯ ಸಂಘ ಮಾಧ್ಯಮ ವಕ್ತಾರ ಆನಂದ್, ಜಿಲ್ಲಾ ಉಪಾಧ್ಯಕ್ಷ ಶಿವರಾಯ್, ಉಪಾಧ್ಯಕ್ಷೆ ದೀಪಿಕಾ ಶೆಟ್ಟಿ ಮೊದಲಾವರು ಉಪಸ್ಥಿತರಿದ್ದರು.
Next Story





