ಕಾರ್ಕಳ: ನೂತನ ಪುರಸಭಾ ಸದಸ್ಯರುಗಳಿಗೆ ಸನ್ಮಾನ

ಕಾರ್ಕಳ : ಕರ್ನಾಟಕ ಸರಕಾರದಿಂದ ಕಾರ್ಕಳ ಪುರಸಭೆಗೆ ನಾಮ ನಿರ್ದೇಶನಗೊಂಡ ಪುರಸಭಾ ಸದಸ್ಯರುಗಳಾದ ಶಿವಾಜಿ ರಾವ್, ನಾಗೇಶ್ ಹೆಗ್ಡೆ, ಪ್ರಸನ್ನ ಶೆಟ್ಟಿಗಾರ್, ಸುನೀಲ್ ದೇವಾಡಿಗ ಪುರಸಭಾ ಅಧ್ಯಕ್ಷ ಯೋಗೀಶ್ ದೇವಾಡಿಗರನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿದರು.
ಈ ಸಂದರ್ಭದಲ್ಲಿ ನೂತನ ಸದಸ್ಯರನ್ನು ಪುರಸಭಾ ಅಧ್ಯಕ್ಷ ಯೋಗಿಶ್ ದೇವಾಡಿಗ ಗೌರವಿಸಿದರು.
ಈ ಸಂದರ್ಭದಲ್ಲಿ ಪುರಸಭಾ ಉಪಾಧ್ಯಕ್ಷ ಪ್ರಶಾಂತ್ ಕೋಟ್ಯಾನ್, ಸ್ಥಾಯಿ ಸಮಿತಿ ಅದ್ಯಕ್ಷ ಪ್ರದೀಪ್ ರಾಣೆ, ಪುರಸಭಾ ಸದಸ್ಯ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಶುಭದರಾವ್, ಪುರಸಭಾ ಸದಸ್ಯರಾದ ಸೋಮನಾಥ್ ನಾಯಕ್, ಭೂ ನ್ಯಾಯ ಮಂಡಲಿಯ ಸದಸ್ಯ ಸುನೀಲ್ ಭಂಡಾರಿ, ಮಾಜಿ ಪುರಸಭಾ ಸದಸ್ಯ ವಂದನಾ ಜತ್ತನ್ನಾ ಉಪಸ್ಥಿತರಿದ್ದರು.
Next Story





