ಕೋಳಿ ಅಂಕಕ್ಕೆ ದಾಳಿ: ಓರ್ವ ವಶಕ್ಕೆ
ಕುಂದಾಪುರ, ಫೆ.11: ಕೆಂಚನೂರು ಗ್ರಾಮದ ಕಾವ್ರಾಡಿ ತಲೆಗದ್ದೆ ಎಂಬಲ್ಲಿರುವ ಸರಕಾರಿ ಹಾಡಿಯಲ್ಲಿ ಕೋಳಿ ಅಂಕ ಜುಗಾರಿಗೆ ಫೆ.10ರಂದು ದಾಳಿ ನಡೆಸಿದ ಪೊಲೀಸರು ಓರ್ವನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಖಚಿತ ಮಾಹಿತಿಯಂತೆ ದಾಳಿ ನಡೆಸಿದ ಪೊಲೀಸರು ಕೋಳಿ ಅಂಕ ಜುಗಾರಿಯಲ್ಲಿ ಭಾಗಿಯಾದ ಅರುಣ ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದು ಉಳಿದಂತೆ ಪ್ರವೀಣ, ರಮೇಶ, ನಾಗರಾಜ, ಅಭಿಷೇಕ, ಸೋನು ಹಾಗೂ ಇತರರು ಓಡಿಹೋಗಿ ದ್ದಾರೆ. ಕೋಳಿ ಅಂಕಕ್ಕೆ ಬಳಸಿದ 5 ಕೋಳಿ, ಕೋಳಿ ಬಾಳು, 1000ರೂ. ಹಣವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿ ದ್ದಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





