ಜನನ-ಮರಣ ಪ್ರಮಾಣ ಪತ್ರ: ಪರಿಷ್ಕೃತ ಶುಲ್ಕ ಜಾರಿ

ಉಡುಪಿ, ಫೆ.12: ಭಾರತದ ಮಹಾ ಯೋಜನಾಧಿಕಾರಿಗಳು ಜನನ- ಮರಣ ನೋಂದಣಿ ಅಧಿನಿಯಮ 1969ರ ತಿದ್ದುಪಡಿ ಅಧಿನಿಯಮ 2023ನ್ನು ಅನುಷ್ಠಾನಗೊಳಿಸಿದ್ದು, ಅದರನ್ವಯ ಕರ್ನಾಟಕ ಜನನ ಮರಣ ನೋಂದಣಿ ನಿಯಮಗಳು 1999ಕ್ಕೆ ತಿದ್ದುಪಡಿಯನ್ನು 2024ರ ಡಿಸೆಂಬರ್ 31 ರಂದು ಅಧಿಸೂಚಿಸಲಾಗಿದೆ.
ಈ ಅಧಿಸೂಚನೆಯು 2025ರ ಜನವರಿ 16ರಂದು ಪ್ರಕಟಗೊಂಡಿದೆ. ಅದರಂತೆ ಜನನ-ಮರಣ ಪ್ರಮಾಣ ಪತ್ರ ಪಡೆಯಲು ಪ್ರತಿಯೊಂದು ಜನನ ಮರಣ ಪ್ರಮಾಣ ಪತ್ರಕ್ಕೆ 50 ರೂ., ಜನನ ಮರಣ ತಡ ನೋಂದಣಿ -ದಂಡನಾ ಶುಲ್ಕ 20 ರೂ. (22 ದಿನದಿಂದ 30 ದಿನದವರೆಗೆ, ಆಸ್ಪತ್ರೆಯಲ್ಲಿ ಸಂಭವಿಸಿದ ಜನನ ಮರಣ ಹೊರತುಪಡಿಸಿ), ಜನನ ಮರಣ ತಿದ್ದುಪಡಿ ಶುಲ್ಕ 50 ರೂ. (31 ದಿನದಿಂದ 1 ವರ್ಷದವರೆಗೆ ದಂಡನಾ ಶುಲ್ಕ) ಹಾಗೂ ಜನನ ಮರಣ ತಡ ನೋಂದಣಿ 10 ರೂ. (1 ವರ್ಷದ ನಂತರ- ನ್ಯಾಯಾಲಯದ ಆದೇಶದಂತೆ ಪ್ರಸ್ತುತ) ಪಾವತಿಸಿ, ನಗರಸಭೆಯೊಂದಿಗೆ ಸಹಕರಿಸುವಂತೆ ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.
Next Story





