ಜನಮೆಚ್ಚಿದ ಶಿಕ್ಷಕ ಪರ್ಕಳ ಶಂಕರ್ ಕುಲಾಲ್ ನಿಧನ

ಉಡುಪಿ, ಫೆ.13: ಜನಮೆಚ್ಚಿದ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಪರ್ಕಳ ಶಿವನಗರದ ನಿವಾಸಿ ಶಂಕರ್ ಕುಲಾಲ್ (67) ಅಲ್ಪಕಾಲದ ಅಸೌಖ್ಯದಿಂದ ಮಣಿಪಾಲದ ಕಸ್ತೂರ್‌ಬಾ ಆಸ್ಪತ್ರೆಯಲ್ಲಿ ಬುಧವಾರ ನಿಧನ ಹೊಂದಿದರು. ಪತ್ನಿ, ಪುತ್ರ, ಸಹೋದರ, ಸಹೋದರಿಯರು ಮತ್ತು ಅಪಾರ ಬಂಧು ಮಿತ್ರ ರನ್ನು ಅವರು ಅಗಲಿದ್ದಾರೆ.
ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದ ಶಂಕರ್ ಕುಲಾಲ್ ಪರ್ಕಳ ನೇತಾಜಿ ಸ್ಪೋರ್ಟ್ಸ್ ಕ್ಲಬ್‌ನ ಮಾಜಿ ಅಧ್ಯಕ್ಷರಾಗಿದ್ದರು. ಶಕುನಿ (ಶಂಕರ್ ಕುಲಾಲ್ ನಿಮ್ಮವ) ಎಂಬ ಕಾವ್ಯನಾಮ ದೊಂದಿಗೆ ಹಲವಾರು ಕಥೆ ಕವನಗಳನ್ನು ರಚಿಸಿ ಸಾಹಿತ್ಯ ಸೇವೆಯಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದರು. ಪರ್ಕಳದ ಮಂಗಳಾ ಕಲಾ ಸಾಹಿತ್ಯ ವೇದಿಕೆಯಲ್ಲಿ ಸಕ್ರಿಯರಾಗಿದ್ದರು.
ಸರಕಾರಿ ಶಾಲಾ ಶಿಕ್ಷಕನಾಗಿ ಕಬ್ಬಿನಾಲೆ, ಆತ್ರಾಡಿ, ಮುಂಡುಜೆ, ಬಂಗ್ಲೆಗುಡ್ಡೆ, ಅಚ್ಚಡ ಮುಂತಾದ ಶಾಲೆಗಳಲ್ಲಿ ಸೇವೆ ಸಲ್ಲಿಸಿ ಮುಖ್ಯೋಪಾಧ್ಯಾಯ ಹುದ್ದೆಯಲ್ಲಿ ನಿವೃತ್ತಿ ಹೊಂದಿದ್ದರು. ತನ್ನ ವಿಶಿಷ್ಠ ಶೈಲಿಯ ಪಾಠದಿಂದ ಎಳೆಯ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಕಲಿಸುತಿದ್ದ ಅವರು ಜನಮೆಚ್ಚಿದ ಶಿಕ್ಷಕ ಪ್ರಶಸ್ತಿಯನ್ನು ಪಡೆದಿದ್ದರು.







