ವೃದ್ಧ ಆತ್ಮಹತ್ಯೆ

ಮಲ್ಪೆ, ಫೆ.14: ಅಧಿಕ ರಕ್ತದೊತ್ತಡ, ಕೈಕಾಲು ನೋವಿನಿಂದ ಬಳಲುತಿದ್ದು, ಮದ್ಯಸೇವನೆಯ ಚಟ ಹೊಂದಿದ್ದ ವೃದ್ಧರೊ ಬ್ಬರು ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೆಳಾರ್ಕಳಬೆಟ್ಟು ಗ್ರಾಮದ ವಿಷ್ಣುಮೂರ್ತಿ ನಗರದಿಂದ ವರದಿಯಾಗಿದೆ.
ರಾಜು ಕೃಷ್ಣಪ್ಪ (62) ಎಂಬವರೇ ಆತ್ಮಹತ್ಯೆ ಮಾಡಿಕೊಂಡ ವೃಕ್ತಿಯಾಗಿದ್ದಾರೆ. ಇವರು ಗುರುವಾರ ಸಂಜೆ 5:30ರಿಂದ 7 ಗಂಟೆ ನಡುವಿನ ಅವಧಿಯಲ್ಲಿ ವಿಷ್ಣುಮೂರ್ತಿ ನಗರದಲ್ಲಿರುವ ಹಳೆಯ ಕಟ್ಟಡದ ಮಾಡಿನ ಜಂತಿಗೆ ನೈಲಾನ್ ಹಗ್ಗ ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





