ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆ: ಶಿರ್ವ ಫೈಝುಲ್ ಇಸ್ಲಾಂ ವಿದ್ಯಾರ್ಥಿಗಳ ಸಾಧನೆ

ಶಿರ್ವ, ಫೆ.15: ಕುಬುಡೊ ಬುಡೊಕಾನ್ ಕರಾಟೆ ಅಸೋಸಿಯೇಶನ್ ಕರ್ನಾಟಕ ಇದರ ಸಹಯೋಗದಲ್ಲಿ ಇತ್ತೀಚೆಗೆ ಉದ್ಯಾವರ ಗ್ರಾಪಂ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಮುಕ್ತ ತುಳುನಾಡು ಕರಾಟೆ ಚಾಂಪಿಯನ್ ಶಿಪ್- 2025ರಲ್ಲಿ ಶಿರ್ವದ ಫೈಝುಲ್ ಇಸ್ಲಾಂ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಮುಹಮ್ಮದ್ ಸಯ್ಯಾಂ ಖಾಝಿ ದ್ವಿತೀಯ, ಅಫಾಕ್ ಅಬ್ಬಾಸ್ ತೃತೀಯ, ಮುಹಮ್ಮದ್ ಆದಿಲ್ ತೃತೀಯ, ಐಮನ್ ಅಬ್ದುಲ್ ಖಾದರ್ ತೃತೀಯ ಹಾಗೂ ಖದೀಜ ಶಫಿನ್ ತೃತೀಯ ಸ್ಥಾನ ಗೆದ್ದುಕೊಂಡಿದ್ದಾರೆ. ಇವರು ಜಪಾನ್ ಶೋಡೋಕಾನ್ ಕರಾಟೆ ಕನ್ನಿಂಜುಕು ಆರ್ಗನೈಝೇಶನ್ ಇಂಡಿಯಾ ಇದರ ಕರ್ನಾಟಕ ರಾಜ್ಯದ ಮುಖ್ಯ ಶಿಕ್ಷಕ ಮತ್ತು ಪರೀಕ್ಷಕ ಸಂಶುದ್ದೀನ್ ಎಚ್.ಶೇಖ್ ಅವರಿಂದ ತರಬೇತಿ ಪಡೆದಿದ್ದಾರೆ.
Next Story





