ಅಕ್ರಮ ದಾಸ್ತಾನು: ಅನ್ನಭಾಗ್ಯದ ಅಕ್ಕಿ ವಶ

ಫೈಲ್ ಫೋಟೊ
ಕೋಟ, ಫೆ.15: ಕೋಟತಟ್ಟು ಗ್ರಾಮದ ಪಡುಕೆರೆಯ ಶ್ರೀಸಾಯಿರಾಮ್ ಜನರಲ್ ಸ್ಟೋರ್ ನಲ್ಲಿ ಕಾನೂನು ಬಾಹಿರವಾಗಿ ಸಂಗ್ರಹಿಸಿಟ್ಟಿದ್ದ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು ಕೋಟ ಪೊಲೀಸರು ಫೆ.14ರಂದು ಸಂಜೆ ವೇಳೆ ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿಯ ದಾಳಿ ನಡೆಸಿದ ಬ್ರಹ್ಮಾವರ ಆಹಾರ ನಿರೀಕ್ಷಕರು, ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಅಂಗಡಿಯಲ್ಲಿ ಒಟ್ಟು 31 ಚಿಲದಲ್ಲಿ ಸಂಗ್ರಹಿಸಿ ಇಡಲಾದ 1,503.55 ಕೆ.ಜಿ. ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





