ಕಫದಿಂದ ಮೂರು ತಿಂಗಳ ಮಗು ಮೃತ್ಯು

ಸಾಂದರ್ಭಿಕ ಚಿತ್ರ
ಕಾರ್ಕಳ, ಫೆ.15: ಕಫದ ತೊಂದರೆಯಿಂದ ಮೂರು ತಿಂಗಳ ಮಗುವೊಂದು ಮೃತಪಟ್ಟ ಘಟನೆ ಫೆ.14ರಂದು ರಾತ್ರಿ ವೇಳೆ ನಡೆದಿದೆ.
ನಿಂಜೂರು ಗ್ರಾಮದ ಪೂರ್ಣಿಮಾ ಎಂಬವರ ಮೂರು ತಿಂಗಳ ಗಂಡು ಮಗು ಧನ್ವಿತ್ ಮೃತ ದುದೈರ್ವಿ. ಕಫದ ತೊಂದರೆ ಉಲ್ಬಣಗೊಂಡು ತೀವ್ರ ಅಸ್ವಸ್ಥಗೊಂಡ ಮಗು ಕಾರ್ಕಳ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟಿತು ಎಂದು ತಿಳಿದುಬಂದಿದೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





