ಕಾರ್ಕಳ| ಚಾರ್ಜ್‌ಗಿಟ್ಟ ಮೊಬೈಲ್ ಸ್ಫೋಟ: ಮನೆಯನ್ನು ಆವರಿಸಿದ ಬೆಂಕಿ
ಪೀಠೋಪಕರಣಗಳು, ಇಲೆಕ್ಟ್ರಾನಿಕ್ಸ್ ಸಾಮಗ್ರಿಗಳು ಬೆಂಕಿಗಾಹುತಿ

ಕಾರ್ಕಳ, ಫೆ.15: ಮನೆಯಲ್ಲಿ ಚಾರ್ಜ್‌ಗಿಟ್ಟ ಮೊಬೈಲ್ ಫೋನ್ ಸ್ಫೋಟಗೊಂಡು ಇಡೀ ಮನೆಯನ್ನೇ ಬೆಂಕಿ ಆವರಿಸಿಕೊಂಡ ಘಟನೆ ತೆಳ್ಳಾರು ರಸ್ತೆಯ 11ನೇ ಕ್ರಾಸ್‌ನ ಮರತ್ತಪ್ಪ ಶೆಟ್ಟಿ ಕಾಲನಿಯಲ್ಲಿ ಶನಿವಾರ ಮುಂಜಾನೆ ನಡೆದಿದೆ.
ಮರತ್ತಪ್ಪ ಶೆಟ್ಟಿ ಕಾಲನಿಯ ಕಿಶೋರ್ ಕುಮಾರ್ ಶೆಟ್ಟಿ ಎಂಬವರ ಮನೆಯಲ್ಲಿ ಈ ಅವಘಡ ಸಂಭವಿಸಿದೆ.
ಮನೆಯಲ್ಲಿ ಚಾರ್ಜ್‌ಗಿಟ್ಟಿದ್ದ ಮೊಬೈಲ್ ಫೋನ್ ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಸ್ಫೋಟಗೊಂಡಿದೆ. ಇದರಿಂದ ಕಾಣಿಸಿಕೊಂಡ ಬೆಂಕಿ ಎರಡು ಅಂತಸ್ತಿನ ಮನೆಯನ್ನು ಆವರಿಸಿದೆ. ವಿಷಯ ತಿಳಿದು ತಕ್ಷಣವೇ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ದಳ ಸಿಬ್ಬಂದಿ ಎರಡೂವರೆ ಗಂಟೆಗಳ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು. ಆದರೆ ಅಷ್ಟರಲ್ಲಿ ಟಿವಿ, ಕಿಟಕಿ, ಫ್ಯಾನ್, ಮೊಬೈಲ್, ಇಂಟೀರಿಯರ್, ಸೋಫಾ ಸೇರಿದಂತೆ ವಿವಿಧ ಪೀಠೋಪಕರಣಗಳು ಬೆಂಕಿಗಾಹುತಿಯಾಗಿದೆ. ಸುಮಾರು 7 ಲಕ್ಷ ರೂ ನಷ್ಟ ಉಂಟಾಗಿದೆ ಎಂದು ಹೇಳಲಾಗಿದೆ.
ಮನೆಯ ಮಾಲಕ ಕಿಶೋರ್ ಕುಮಾರ್ ಶೆಟ್ಟಿ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿ ಪ್ರಾಣಪಾಯದಿಂದ ಪಾರಾಗಿದ್ದಾರೆ.
Next Story





