ಅಕಸ್ಮಿಕ ಬೆಂಕಿ: ರಿಪೇರಿ ವಾಹನಗಳಿಗೆ ಹಾನಿ

ಕುಂದಾಪುರ, ಫೆ.16: ತ್ರಾಸಿ ಜಂಕ್ಷನ್ ಬಳಿ ಕುರುಚಲು ಗಿಡಗಳಿರುವ ಪ್ರದೇಶಕ್ಕೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಅಲ್ಲೇ ಸಮೀಪದಲ್ಲಿ ರಿಪೇರಿ ಗಾಗಿ ನಿಲ್ಲಿಸಿದ್ದ ವಾಹನಗಳಿಗೆ ಹಾನಿಯಾಗಿರುವ ಘಟನೆ ರವಿವಾರ ಸಂಜೆ ನಡೆದಿದೆ.
ಕುರುಚಲು ಗಿಡಗಳಿಗೆ ಬೆಂಕಿ ತಗುಲಿ ಹೊತ್ತಿಕೊಂಡಿದ್ದು, ಬಳಿಕ ಬೆಂಕಿಯು ಅಲ್ಲೇ ಸಮೀಪ ರಿಪೇರಿಗಾಗಿ ನಿಲ್ಲಿಸಿದ ವಾಹನ ಗಳಿಗೂ ತಗಲಿತು. ಇದರಿಂದ ಈ ವಾಹನಗಳು ಬೆಂಕಿಯಿಂದ ಹಾನಿಯಾಗಿವೆ. ಸ್ಥಳೀಯರು ನೀಡಿದ ಮಾಹಿತಿಯಂತೆ ಕೂಡಲೇ ಸ್ಥಳಕ್ಕೆ ಆಗಮಿಸಿದ ಬೈಂದೂರು ಮತ್ತು ಕುಂದಾಪುರ ಅಗ್ನಿಶಾಮಕ ವಾಹನಗಳ ಸಹಿತ ಸಿಬ್ಬಂದಿ ಬೆಂಕಿ ನಂದಿಸಿದರು. ಇದರಿಂದ ಅಕ್ಕ-ಪಕ್ಕದ ಮನೆಗಳಿಗೆ ಬೆಂಕಿ ವ್ಯಾಪಿಸುವುದನ್ನು ತಡೆಯಲಾಯಿತು.
Next Story





