ಒಂದು ಹೆಜ್ಜೆ ರಕ್ತದಾನಿ ಬಳಗದ ಪೋಸ್ಟರ್ ಅನಾವರಣ

ಉಡುಪಿ, ಫೆ.19: ಮಂಗಳೂರು ಶ್ರೀನಂದಿಕೇಶ್ವರ ನಾಟಕ ಸಂಘ ಅರ್ಪಿಸುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದಲ್ಲಿ ರಾಷ್ಟ್ರಮಟ್ಟದ ಕರೋಕೆ ಗಾಯನ ಹಾಗೂ ಕರುನಾಡ ಸೇನಾನಿಗಳ ವೇದಿಕೆಯ ಅಂಗಸಂಸ್ಥೆಯಾದ ಮೈಸೂರು ಒಂದು ಹೆಜ್ಜೆ ರಕ್ತದಾನಿ ಬಳಗದ ಪೋಸ್ಟರ್ ಅನ್ನು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಇತ್ತೀಚೆಗೆ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಕೃಷಿಕ ಜೋಸೆಫ್ ಲೊಬೋ ಶಂಕರಪುರ, ನಟ ಹಾಗೂ ನಿರ್ದೇಶಕ ಸೋಮನಾಥ ಶೆಟ್ಟಿ, ಬಾಲ ಪ್ರತಿಭೆ ಆಯುಷ್ ಮೆನೇಜಸ್, ರಿಸೆಲ್ ಮೆಲ್ಬಾ ಕ್ರಸ್ಥಾ ಅವರನ್ನು ಸನ್ಮಾನಿಸಲಾಯಿತು. ಬಳಿಕ ರಾಷ್ಟ್ರಮಟ್ಟದ ಕರೋಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಒಂದು ಹೆಜ್ಜೆ ರಕ್ತದಾನಿ ಬಳಗತ ಸ್ಥಾಪಕ ಅಧ್ಯಕ್ಷ ರಕ್ತದಾನಿ ಮಂಜು ರಕ್ತದಾನದ ಕುರಿತು ಮಾಹಿತಿ ನೀಡಿದರು. ಏಳು ಬಾರಿ ಮತದಾನ ಮಾಡಿರುವ ಉಡುಪಿ ಜಿಲ್ಲೆಯ ರಕ್ತದಾನಿ ಬಳಗದ ನೀಮ ಲೋಬೋ ಅವರಿಗೆ ಕರುನಾಡ ರಕ್ತ ಸೇನಾನಿ ಪ್ರಮಾಣ ಪತ್ರವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾನವ ಹಕ್ಕುಗಳ ಸಂಘಟನೆ ಉಡುಪಿ ಜಿಲ್ಲಾಧ್ಯಕ್ಷ ಪ್ರಸಾದ್ ರೈ, ನಟ ನಂದನ್ ಬೆಂಗಳೂರು, ಸ್ಯಾಂಡಲ್‌ವುಡ್ ಫಿಲಂ ಇನ್ಸ್ಟಿಟ್ಯೂಟ್ ಸಂಸ್ಥಾಪಕ ಆನಂದ್ ಕಲ್ಪತರು, ಉಡುಪಿ ಕರೋಕೆ ಮ್ಯೂಸಿಕಲ್ ಕ್ಲಬ್‌ನ ಸಂಸ್ಥಾಪಕ ಮದನ್ ಮಣಿಪಾಲ್, ಕೋಸ್ಟಲ್ ಸ್ಟಾರ್ ಮ್ಯೂಸಿಕ್ ಕ್ಲಬ್ ಸಂಸ್ಥಾಪಕ ಪ್ರಕಾಶ್ ಕಾಮತ್, ಗಾಯಕ ವಿಲ್ಫೆಡ್ ವಿಜಯ ಡೇಸ ಶಂಕರಪುರ, ಪತ್ರಕರ್ತ ಪ್ರಕಾಶ್ ಸುವರ್ಣ ಕಟ್ಪಾಡಿ, ಕಲಾವಿದ ನಾಗೇಶ್ ಕಾಮತ್ ಕಟ್ಪಾಡಿ ಉಪಸ್ಥಿತರಿದ್ದರು.







