ವಿದ್ಯಾರ್ಥಿನಿಯ ಚಿನ್ನದ ಸರ ಅಪಹರಣ: ಪ್ರಕರಣ ದಾಖಲು

ಬೈಂದೂರು, ಫೆ.25: ಕಾಲೇಜು ಮುಗಿಸಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿನಿಯ ಚಿನ್ನವನ್ನು ಬೈಕಿನಲ್ಲಿ ಬಂದ ಅಪರಿಚಿತರು ಅಪರಹರಿಸಿ ಪರಾರಿಯಾಗಿರುವ ಘಟನೆ ಕರಿಕಟ್ಟೆ ಎಂಬಲ್ಲಿ ಫೆ.24ರಂದು ಸಂಜೆ ವೇಳೆ ನಡೆದಿದೆ.
ಕುಂದಾಪುರದ ಬಿಬಿ ಹೆಗ್ಡೆ ಕಾಲೇಜಿನಲ್ಲಿ ಎರಡನೇ ವರ್ಷದ ಬಿಕಾಂ ವಿದ್ಯಾರ್ಥಿ ದೀಕ್ಷಾ(18) ಎಂಬವರು ಕಾಲೇಜು ಮುಗಿಸಿ ಕೊಂಡು ಕರಿಕಟ್ಟೆ ಕಡೆಯಿಂದ ಅಳ್ವೆಗದ್ದೆ ಕಡೆಗೆ ರಸ್ತೆಯ ಬದಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಎದುರಿನಿಂದ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತರು, ದೀಕ್ಷಾ ಅವರನ್ನು ಅಡ್ಡಗಟ್ಟಿ ಕುತ್ತಿಗೆಯಲ್ಲಿದ್ದ 80,000ರೂ. ಮೌಲ್ಯದ ಸುಮಾರು 10ಗ್ರಾಂ ತೂಕದ ಚಿನ್ನದ ಸರವನ್ನು ಬಲಾತ್ಕಾರವಾಗಿ ಎಳೆದುಕೊಂಡು ಪರಾರಿಯಾದರು. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





