ಸಮುದ್ರದಲ್ಲಿ ಮುಳುಗಿ ಮೀನುಗಾರ ಮೃತ್ಯು

ಕುಂದಾಪುರ, ಫೆ.25: ಸಮುದ್ರದಲ್ಲಿ ಮಾರಣಬಲೆ ಬಿಡುವ ವೇಳೆ ಯುವಕನೋರ್ವ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ಫೆ.25ರಂದು ಬೆಳಗ್ಗೆ ಕೋಟೇಶ್ವರ ಹಳೆಅಳಿವೆ ಬಳಿ ನಡೆದಿದೆ.
ಮೃತರನ್ನು ಬೀಜಾಡಿ ನಿವಾಸಿ ಮೇಘರಾಜ್ (24) ಮೃತ ಯುವಕ ಎಂದು ಗುರುತಿಸಲಾಗಿದೆ. ಇವರು ಸಮುದ್ರದಲ್ಲಿ ಮಾರಣಬಲೆ ಬಿಡಲೆಂದು ಹೋಗಿದ್ದು ಈ ವೇಳೆ ಸಮುದ್ರದ ಅಲೆಗೆ ಸಿಲುಕಿ ನೀರುಪಾಲಾದರು. ಸಂಜೆ ವೇಳೆ ಇವರ ಮೃತದೇಹವು ಬೀಜಾಡಿ ಸಮೀಪ ಕಡಲ ತೀರದಲ್ಲಿ ಪತ್ತೆಯಾಗಿದೆ.
ತಕ್ಷಣ ಸ್ಥಳಕ್ಕಾಗಮಿಸಿದ ಗಂಗೊಳ್ಳಿ ಕರಾವಳಿ ಕಾವಲು ಪಡೆ ಸಿಬ್ಬಂದಿಗಳು ಹಾಗೂ ಕರಾವಳಿ ನಿಯಂತ್ರಣ ದಳದ ಸಿಬ್ಬಂದಿಗಳಾದ ಸುದರ್ಶನ್ ಎಸ್. ಕುಂದರ್, ಕೃಷ್ಣ ಕಾಂಚನ್, ಸಂತೋಷ್ ಪೂಜಾರಿ, ಸುಧಾಕರ್ ಖಾರ್ವಿ ಇವರು ಮೃತದೇಹವನ್ನು ಪರಿಶೀಲಿಸಿ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದರು. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





