ಉಡುಪಿ: ಆಧಾರ್ ನೋಂದಣಿ, ತಿದ್ದುಪಡಿ ಬಯೋ ಮೆಟ್ರಿಕ್ ನೋಂದಣಿಗೆ ಅವಕಾಶ

ಉಡುಪಿ, ಮಾ.1: 0-5 ವಷರ್ದೊಳಗಿನ ಮಕ್ಕಳ ಹೊಸ ಆಧಾರ್ ನೋಂದಣಿ ಮತ್ತು 5 ವಷರ್ ಮತ್ತು 15 ವಷರ್ ಮೇಲ್ಪಟ್ಟ ಮಕ್ಕಳ ಬಯೋ ಮೆಟ್ರಿಕ್ ನೋಂದಣಿ ಮತ್ತು ಆಧಾರ್‌ನಲ್ಲಿ ಮೊಬೈಲ್ ನಂಬರ್ ಸೇರ್ಪಡೆ ಗೊಳಿಸುವ ಪ್ರಕ್ರಿಯೆ ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳ್ಳಬೇಕಿರು ವುದರಿಂದ ತಮ್ಮ ಹತ್ತಿರದ ಆಧಾರ್ ಕೇಂದ್ರಗಳಲ್ಲಿ, ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬಹುದು.
ಅಲ್ಲದೇ ಉಡುಪಿ, ಕಾರ್ಕಳ, ಕುಂದಾಪುರ, ಬೈಂದೂರು ಮತ್ತು ಜಿಲ್ಲಾಧಿಕಾರಿ ಕಚೇರಿಯಲ್ಲಿಯೂ ಹೊಸ ನೋಂದಣಿ, ತಿದ್ದುಪಡಿ ಮತ್ತು ಬಯೋ ಮೆಟ್ರಿಕ್ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Next Story





