ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಲ್ಲಿ ‘ಬ್ರಹ್ಮಾಂಡ ಭ್ರಷ್ಟಾಚಾರ’
ಎರಡನೇ ವಾರ ಪ್ರವೇಶಿಸಿದ ಅನ್ನದಾತರ ‘ನ್ಯಾಯಾಗ್ರಹ’ ಹೋರಾಟ

ಬ್ರಹ್ಮಾವರ, ಮಾ.1: ಬ್ರಹ್ಮಾವರ ಸಹಕಾರಿ ಸಕ್ಕರೆ ಕಾರ್ಖಾನೆಯ ಗುಜರಿ ಮಾರಾಟದಲ್ಲಿ ನಡೆದ ಬಹುಕೋಟಿ ವಂಚ ನೆಯ ತನಿಖೆಯಲ್ಲಿ ಅನುಸರಿ ಸುತ್ತಿರುವ ವಿಳಂಬ ನೀತಿಯನ್ನು ಖಂಡಿಸಿ ಉಡುಪಿ ಜಿಲ್ಲಾ ರೈತ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ‘ಅನ್ನದಾತರ ಅಹೊ ರಾತ್ರಿ ಧರಣಿ ಸತ್ಯಾಗ್ರಹ’ ಇದೀಗ ಎರಡನೇ ವಾರವನ್ನು ಪ್ರವೇಶಿಸಿದೆ.
ಬ್ರಹ್ಮಾವರದ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲೇ ಬೈಕಾಡಿ ಗ್ರಾಮದಲ್ಲಿ ಈಗ ಬಾಗಿಲು ಹಾಕಿರುವ ದ.ಕ.ಜಿಲ್ಲಾ ಸಹಕಾರಿ ಸಕ್ಕರೆ ಕಾರ್ಖಾನೆಯ ಎದುರು ಕಳೆದ ಫೆ.22ರಂದು ಪ್ರಾರಂಭಗೊಂಡ ಅನಿರ್ಧಿಷ್ಠಾವಧಿಯ ಈ ಅಹೋರಾತ್ರಿ ಧರಣಿ ಸತ್ಯಾಗ್ರಹ ಇಂದು ಎಂಟನೇ ದಿನವೂ ಮುಂದುವರಿ ಯಿತು.
ಉಡುಪಿ ಜಿಲ್ಲಾ ರೈತ ಸಂಘದ ಸಿದ್ದಾಪುರ ವಲಯದ ಮುಂದಾಳತ್ವದಲ್ಲಿ ಶನಿವಾರದ ಪ್ರತಿಭಟನೆ ನಡೆದು, ಭ್ರಷ್ಟಾಚಾರ ಪ್ರಕರಣದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸಂಘಟನೆ ಆಗ್ರಹಿಸಿತು. ಈ ಸಂದರ್ಭದಲ್ಲಿ ರೈತ ಸಂಘದ ಸಿದ್ದಾಪುರ ವಲಯ ಅಧ್ಯಕ್ಷ ಸಂಪಿಗೇಡಿ ಸಂಜೀವ ಶೆಟ್ಟಿ, ಪ್ರಮುಖರಾದ ಶಾಡಿಗುಂಡಿ ರಾಜೀವ ಶೆಟ್ಟಿ, ಐರ್ಬೆಲು ರಾಜು ಮಾಸ್ಟರ್, ವಾಸುದೇವ ಪೈ, ಕಡ್ರಿ ಸತೀಶ್ ಶೆಟ್ಟಿ ಮುಂತಾದವರು ಮುಂಚೂಣಿಯಲ್ಲಿದ್ದರು.
ಇಂದಿನ ಧರಣಿಯಲ್ಲಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಹಾಗೂ ವಿಧಾನಪರಿಷತ್‌ನ ಮಾಜಿ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಹೈಕಾಡಿ, ಪ್ರಧಾನ ಕಾರ್ಯದರ್ಶಿ ಬೆಳ್ವೆ ಸತಿಶ್ ಕಿಣಿ, ಎಂ.ಎ ಗಫೂರ್, ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಮಹೇಶ್ ಹೆಗ್ಡೆ, ಅಶೋಕ್ ಶೆಟ್ಟಿ ಚೊರಾಡಿ, ಸದಾನಂದ ಶೆಟ್ಟಿ ಕೆದೂರು, ವಂಡಬಳ್ಳಿ ಜಯರಾಮ ಶೆಟ್ಟಿ, ಪ್ರದೀಪ್ ಬಲ್ಲಾಳ್, ಸುರೇಶ್ ಶೆಟ್ಟಿ ಹೈಕಾಡಿ, ಅಶೋಕ್‌ಕುಮಾರ್ ಶೆಟ್ಟಿ ಮೈರ್ಮಾಡಿ, ಬಿ.ಭುಜಂಗ ಶೆಟ್ಟಿ, ಉಮೇಶ್ ಶೆಟ್ಟಿ ಶಾನ್ಕಟ್ಟು, ಸುದೇಶ್ ಹೆಗ್ಡೆ, ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಮುಖಂಡರಾದ ಮದನ್ ಕುಮಾರ್, ಕೋಣಿ ಕೃಷ್ಣದೇವ ಕಾರಂತ್, ಕುಮಾರ ಖಾರ್ವಿ ಮೊದಲಾದವರು ಭಾಗವಹಿಸಿದ್ದರು.
ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಾಳೆ ಉಡುಪಿಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ರೈತ ನಾಯಕರ ನೇತೃತ್ವದಲ್ಲೇ ‘ಭ್ರಷ್ಟಾಚಾರದ ವಿರುದ್ಧ ಕ್ರಮಕ್ಕೆ ಆಗ್ರಹಿಸಿ’ ನಡೆದಿರುವ ಈ ಧರಣಿಯ ಸ್ಥಳಕ್ಕೆ ಭೇಟಿ ನೀಡಬಹುದೆಂಬ ನಿರೀಕ್ಷೆಯನ್ನು ಧರಣಿನಿರತರು ಹೊಂದಿದ್ದಾರೆ.







